ಮೂರಾಬಟ್ಟಿಯಾದ ಬಿಸಿಯೂಟ ಕಾರ್ಯಕರ್ತರ ಬದುಕು ಮೂರು ನಾಲ್ಕು ತಿಂಗಳಾದರೂ ಸಿಗದ ವೇತನ…..

Suddi Sante Desk

ಬೆಂಗಳೂರು –

ಬಿಡಿಗಾಸಿನ ಸಂಬಳ ಪಡೆದು ಬಡ ಮಕ್ಕಳಿಗೆ ಅಡುಗೆ ಮಾಡಿ ಬಡಿಸುವ ಬಿಸಿಯೂಟ ಕಾರ್ಯಕರ್ತೆಯರಿಗೆ ಮೂರು ತಿಂಗಳಿಂದ ಸಂಬಳವಿಲ್ಲ.ಅಷ್ಟೇ ಅಲ್ಲ ಶಿಕ್ಷಕರ ಕೊರತೆಯನ್ನು ತಾತ್ಕಾಲಿಕವಾಗಿ ನೀಗಿಸಲು ನೇಮಕ ಮಾಡಿಕೊಂಡ 34 ಸಾವಿರ ಅತಿಥಿ ಶಿಕ್ಷಕರಿಗೂ ಮೂರು ತಿಂಗಳಿಂದ ಸರ್ಕಾರ ಗೌರವಧನ ಪಾವತಿಸಿಲ್ಲ ರಾಜ್ಯ ಸರ್ಕಾರ

ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶಭರಿತ ಆಹಾರ ಒದಗಿಸುವ ದೃಷ್ಟಿಯಿಂದ ಸರ್ಕಾರ ಮಧ್ಯಾಹ್ನದ ಬಿಸಿ ಯೂಟ ಯೋಜನೆ ಆರಂಭಿಸಿ ಅಡುಗೆಯವರು ಮತ್ತು ಅಡುಗೆ ಸಹಾಯಕರನ್ನು ನೇಮಕ ಮಾಡಿಕೊಂಡಿದೆ.ಈ ನೌಕರರಿಗೆ ಕ್ರಮವಾಗಿ ತಿಂಗಳಿಗೆ 2,600 ಹಾಗೂ 2,500 ರೂ. ಗೌರವಧನ ನೀಡಲಾಗುತ್ತದೆ.2022-23ನೇ ಸಾಲಿನ ಬಜೆಟ್ ನಲ್ಲಿ ಜನವರಿ 2022ರಿಂದ ಅನ್ವಯವಾಗುವಂತೆ 1,000 ರೂ ಹೆಚ್ಚಳ ಮಾಡಲಾಗಿದೆ.ಆದರೆ ರಾಜ್ಯಾದ್ಯಂತ ಇರುವ 1.19 ಲಕ್ಷ ಬಿಸಿಯೂಟ ತಯಾರಿಕೆ ನೌಕರರಿಗೆ ಮೂರು ತಿಂಗಳಿಂದ ಗೌರವಧನ ಪಾವತಿಸಿಲ್ಲ ಇದರಿಂದ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನೇರ ನಗದು ವರ್ಗಾವಣೆ ಅಳವಡಿಕೆಯ ತಾಂತ್ರಿಕ ಕಾರಣ ದಿಂದ ಬಿಸಿಯೂಟ ನೌಕರರಿಗೆ ಗೌರವ ಧನ ಪಾವತಿ ಯಾಗಿಲ್ಲ ಸಮಸ್ಯೆ ಸರಿಪಡಿಸಲು ಇಲಾಖೆ ಬಳಿ ಸರಿಯಾದ ಡೇಟಾ ಇಲ್ಲ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಲ್ಲಿ ಐಸಿಡಿಎಸ್ ಕಾರ್ಯಕ್ರಮ ಜಾರಿ ವೇಳೆ ಸಂಬಳ ವ್ಯತ್ಯಯ ವಾಗದಂತೆ ಹಳೇ ಪದ್ಧತಿಯಲ್ಲೇ ವೇತನ ನೀಡಿ ತಾಂತ್ರಿಕತೆ ಅಳವಡಿಸಲಾಗಿದೆ.ಆದರೆ ಬಿಸಿಯೂಟ ತಯಾ ರಕರ ಬಗ್ಗೆ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂಬುದು ಬಿಸಿಯೂಟ ನೌಕರರ ಆರೋಪವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.