ಒಂದೇ ಊರಿನಲ್ಲಿ 425 ಶಿಕ್ಷಕರು ರಾಜ್ಯದ ಗಮನ ಸೆಳೆಯುತ್ತಿದೆ ಈ ಗ್ರಾಮ…..ಶಿಕ್ಷಕರ ಗ್ರಾಮದ ಕುರಿತು ಒಂದು ವಿಶೇಷ ಸ್ಟೋರಿ…..

Suddi Sante Desk

ಬೆಳಗಾವಿ

ಹೌದು ಬೆಳಗಾವಿ ತಾಲ್ಲೂಕಿನ ಯಳ್ಳೂರ ಗ್ರಾಮದ ಶಿಕ್ಷಕರ ಊರಾಗಿದ್ದು ಹೆಚ್ಚಿನವರು ಉನ್ನತ ಶಿಕ್ಷಣ ಪಡೆದು ಶಿಕ್ಷಕ ಮತ್ತು ಉಪನ್ಯಾಸಕ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಿದ್ದು, ಪ್ರಸ್ತುತ 425 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ.400 ಮಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.

ಸುಮಾರು 19 ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ, ಐದಕ್ಕಿಂತಲೂ ಹೆಚ್ಚು ಜನ ಶಿಕ್ಷಕರನ್ನು ಹೊಂದಿದ ಹಲವು ಕುಟುಂಬಗಳಿವೆ.ಬಬನ್‌ ಕಾನ್ಶಿಡೆ ಅವರ ಕುಟುಂಬವೊಂ ದರಲ್ಲೇ 12 ಮಂದಿ ಶಿಕ್ಷಕರಿದ್ದಾರೆ.ಈ ಪೈಕಿ 6 ಮಂದಿ ಸೇವಾ ನಿವೃತ್ತಿ ಹೊಂದಿದ್ದರೆ,ಉಳಿದ 6 ಜನ ಸೇವೆಯಲ್ಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಪರಿಗಣಿಸಿ, ಉಪ ನ್ಯಾಸಕರಾಗಿದ್ದ ಅರುಣ ಸುಳಗೇಕರ್‌ ಅವರಿಗೆ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಗಿದೆ.

ನಮ್ಮೂರಿನಲ್ಲಿ ಕನ್ನಡ,ಮರಾಠಿ,ಉರ್ದು ಮಾಧ್ಯಮ ಸೇರಿ 5 ಸರ್ಕಾರಿ ಪ್ರಾಥಮಿಕ ಶಾಲೆಗಳು,ಒಂದು ಖಾಸಗಿ ಪ್ರಾಥ ಮಿಕ ಶಾಲೆ ಮತ್ತು ನಾಲ್ಕು ಖಾಸಗಿ ಪ್ರೌಢಶಾಲೆಗಳಿವೆ. ನಮ್ಮ ಹಿರಿಯರೂ ಹಿಂದಿನಿಂದಲೂ ಶಿಕ್ಷಣಕ್ಕೆ ಆದ್ಯತೆ ನೀಡುತ್ತ ಬಂದಿದ್ದಾರೆ.ಹಾಗಾಗಿ ಹೆಚ್ಚಿನವರು ಶಿಕ್ಷಕರಾಗಿ ದ್ದಾರೆ ಎಂದು ಯಳ್ಳೂರಿನ ಖಾಸಗಿ ಪ್ರೌಢಶಾಲೆಯೊಂದ ರಲ್ಲಿ ಮುಖ್ಯಶಿಕ್ಷಕರಾಗಿರುವ ಬಬನ್‌ ಕಾನ್ಶಿಡೆ ಅವರು ಹೇಳಿದರು.ಬಬನ್‌ ಅವರು ಈ ಬಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡುವ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿಯಲ್ಲೂ ಇಂಥದ್ದೇ ವೈಶಿಷ್ಟ್ಯ ಕಾಣಬ ಹುದು ಏಳು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ ದಲ್ಲಿ 50ಕ್ಕೂ ಅಧಿಕ ಶಿಕ್ಷಕರು ಹಾಗೂ ಅಷ್ಟೇ ಸಂಖ್ಯೆಯ ಸೈನಿಕರೂ ಇದ್ದಾರೆ.ಕ್ರಿಯಾತ್ಮಕ ಚಟುವಟಿಕೆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹಲವರು ಮಿಂಚುತ್ತಿದ್ದಾರೆ.ಊರಿನ ಶಾಲೆಗಳ ಅಭಿವೃದ್ಧಿಗೂ ಶ್ರಮಿಸುತ್ತಿದ್ದಾರೆ ಎಂದು ಶಿಕ್ಷಕರಾದ ವಿನೋದ ಪಾಟೀಲ,ರಮೇಶ ಪೂಜಾರ, ಅಜ್ಜಪ್ಪ ಅಂಗಡಿ, ಗಜಾನನ ಸೊಗಲಣ್ಣವರ ತಿಳಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.