ಬೆಂಗಳೂರು –
ಜಿಲ್ಲೆಯ ಎಲ್ಲಾ ಖಾಸಗಿ ಶಾಲೆಗಳು ತಾವು ಪಡೆಯುವ ಶಾಲಾ ಶುಲ್ಕವನ್ನು ಸಾರ್ವಜನಿಕರಿಗೆ ಕಾಣುವಂತೆ ಶಾಲಾ ಮುಂಭಾಗದಲ್ಲಿ ಪ್ರಕಟಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾರ್ವ ಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಗಂಗ ಮಾರೇಗೌಡ ಅವರು ಸೂಚಿಸಿದ್ದಾರೆ.

ಖಾಸಗಿ ಶಾಲೆಗಳು ಬಡ ಗ್ರಾಮೀಣ ಪೋಷಕರನ್ನು ಹೆದರಿಸಿ,ಶುಲ್ಕ ವಸೂಲಿ ಮಾಡುತ್ತಿದ್ದಾರೆ ಹಾಗೂ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ಅನುಮತಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಯಾವುದೇ ಶಾಲೆಯ ಶಾಲಾ ಶುಲ್ಕ ಕ್ಕೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪೋಷಕರು ಲಿಖಿತವಾಗಿ ದೂರು ಸಲ್ಲಿಸಬೇಕು ಎಂದು ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.ದೇವನಹಳ್ಳಿ ತಾಲ್ಲೂಕಿನ ವಿಜ ಯಪುರದಲ್ಲಿರುವ ಖಾಸಗಿ ಶಾಲೆಯವರು ಶುಲ್ಕ ವನ್ನು ಸಂಪೂರ್ಣವಾಗಿ ಪಾವತಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಶಾಲೆ ಆರಂಭ ನಂತರ ಶಾಲೆಯ ಆಡಳಿತ ಮಂಡಳಿ ಯೊಂದಿಗೆ ಚರ್ಚಿಸಲಾಗುವುದು.ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಶೇ.70ರಷ್ಟು ಶಾಲಾ ಶುಲ್ಕ ಪಡೆ ಯುವ ಬಗ್ಗೆ 2020-21ನೇ ಸಾಲಿನ ಸರ್ಕಾರದ ಆದೇಶವನ್ನು 2021-22ನೇ ಸಾಲಿಗೂ ಸರ್ಕಾರ ದಿಂದ ನಿರೀಕ್ಷಿಸಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.