ರಾಯಚೂರು –
ಕೊರೊನಾದಿಂದ ಪೋಷಕರನ್ನು ಕಳೆದುಕೊಂಡು ರಾಜ್ಯದಲ್ಲಿ 35 ಮಕ್ಕಳು ಅನಾಥರಾಗಿದ್ದಾರೆ.ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ರಾಯಚೂರಿನಲ್ಲಿ ಮಾತನಾ ಡಿದ ಅವರು ರಾಜ್ಯದಲ್ಲಿ 35 ಮಕ್ಕಳು ಪೋಷಕ ರನ್ನು ಕಳೆದುಕೊಂಡಿದ್ದಾರೆ ಅವರೊಂದಿಗೆ ಸರ್ಕಾರ ಇದೆ ಎಂದರು.
ಅವರ ಜೊತೆಗೆ ಸರ್ಕಾರವಿದೆ.ನಮ್ಮ ಇಲಾಖೆ ಯಿಂದ ಎಲ್ಲ ರೀತಿಯ ಸಹಕಾರ ಇದೆ ಎಂದರು.ಪ್ರತಿ ತಿಂಗಳು ಮಕ್ಕಳ ಖಾತೆಗೆ ಮೂರುವರೆ ಸಾವಿರ ಹಣ ಜಮೆ ಮಾಡಲಾಗುತ್ತಿದೆ.ಉಚಿತ ಶಿಕ್ಷಣ ವ್ಯವಸ್ಥೆ SSLC ಮುಗಿದ ಬಳಿಕ ಟ್ಯಾಬ್ ವ್ಯವಸ್ಥೆ ಮಾಡಲಾ ಗುತ್ತಿದೆ ಎಂದರು.
ಕೊರೊನಾ 3 ಅಲೆ ಆತಂಕ ಇರುವುದರಿಂದ ಆರು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ.ಅನಾಥ ಮಕ್ಕಳ ಜೊತೆಗೆ ವಿಡಿಯೋ ಸಂವಾದ ಕೂಡ ಮಾಡಿದ್ದೇನೆ. ರಾಜ್ಯದಲ್ಲಿ ಮಧ್ಯಮ ಹಾಗೂ ಬಡವರ ಮಕ್ಕಳು ಅನಾಥವಾಗಿದ್ದಾರೆಂದರು.
ಪೋಷಕರು ಮಕ್ಕಳನ್ನು ನೋಡಲು ಆಗಲ್ಲವೆಂದರೆ.
ಅನಾಥ ಮಕ್ಕಳನ್ನು ದತ್ತು ಸ್ವೀಕಾರ ಕೇಂದ್ರಕ್ಕೆ ಶಿಫ್ಟ್ ಮಾಡಲಾಗುವುದು ಸದ್ಯ 31 ಮಕ್ಕಳು ಸಂಬಂಧಿ ಕರು ಪೋಷಣೆಯಲ್ಲಿ ಇದ್ದಾರೆಂದರು.ಅನಾಥ ಮಕ್ಕಳ ಎಲ್ಲಾ ಜವಾಬ್ದಾರಿ ನಮ್ಮ ಇಲಾಖೆ ತೆಗೆದು ಕೊಳ್ಳಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು