ಗ್ರಿಕೋ ರೋಮನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಧಾರವಾಡದ ರಫೀಕ್ ಹೋಳಿ – 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮತ್ತೊಂದು ಐತಿಹಾಸಿದ ಸಾಧನೆ ಮಾಡಿದ ಜಿಲ್ಲೆಯ ಪೈಲ್ವಾನ್

Suddi Sante Desk
ಗ್ರಿಕೋ ರೋಮನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಧಾರವಾಡದ ರಫೀಕ್ ಹೋಳಿ – 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮತ್ತೊಂದು ಐತಿಹಾಸಿದ ಸಾಧನೆ ಮಾಡಿದ ಜಿಲ್ಲೆಯ ಪೈಲ್ವಾನ್

ಗುಜರಾತ್

ಧಾರವಾಡ ಜಿಲ್ಲೆಯ ಹೆಮ್ಮೆಯ ಕುಸ್ತಿಪಟು ಸಧ್ಯ ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿ ರುವ ರಫೀಕ್ ಹೋಳಿ ಮತ್ತೊಂದು ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ.ಹೌದು ಗುಜರಾತ್ ರಾಜ್ಯದ ಗಾಂಧೀನಗರದಲ್ಲಿ ನಡೆದ 36ನೇ ರಾಷ್ಟ್ರೀಯ ಕ್ರೀಡಾಕೂಟ ದಲ್ಲಿ ನಡೆದ ಕ್ರೀಡಾ ಕೂಟದಲ್ಲಿ ರಫೀಕ್ ಹೋಳಿ ಬೆಳ್ಳಿ ಪದಕವನ್ನು ತಮ್ಮ ಮುಡಿಗೆ ಹಾಕಿಕೊಂಡು ಮತ್ತೊಂದು ಪ್ರಶಸ್ತಿಯನ್ನು ತಮ್ಮ ಮುಡಿಗೆ ಹಾಕಿಕೊಂಡಿದ್ದಾರೆ

 

ಹೌದು ಧಾರವಾಡ ತಾಲೂಕಿನ ಸಿಂಗನಹಳ್ಳಿ ಗ್ರಾಮದ ರಫೀಕ್ ಹೋಳಿ ಗ್ರಿಕೋ ರೋಮನ್ ಕುಸ್ತಿ ಚಾಂಪಿಯನ್ ಶಿಪ್ 77 ಕೆಜಿ ವಿಭಾಗದಲ್ಲಿ ಬೆಳ್ಳಿಗೆ  ಮುತ್ತಿಟ್ಟಿದ್ದಾರೆ. ಗುಜರಾತ್ನ ಗಾಂಧಿನಗರ ದಲ್ಲಿ ನಡೆದ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕುಸ್ತಿಪಟು ವಿಶೇಷ ಸಾಧನೆ ಮಾಡಿದ್ದಾರೆ.

 

ಧಾರವಾಡ ತಾಲೂಕಿನ ಸಿಂಗನಹಳ್ಳಿ ಗ್ರಾಮದ ರಫೀಕ್ ಹೋಳಿ  ಗ್ರಿಕೋ ರೋಮನ್ ಕುಸ್ತಿ ಚಾಂಪಿಯನ್ ಶಿಪ್ 77 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.ಈಗಾಗಲೇ  ಕುಸ್ತಿಯಲ್ಲಿ ಹಲವು ಮೈಲುಗಲ್ಲು ಸಾಧಿಸಿ ಗ್ರಾಮೀಣ ಭಾಗದ ಯುವ ಕುಸ್ತಿಪಟುಗಳಿಗೆ ಮಾದರಿಯಾಗಿರುವ ಇವರು ಈಗ ಮತ್ತೊಂದು ಪ್ರಶಸ್ತಿಯ ಮೂಲಕ ಪ್ರೇರಣೆಯಾಗಿದ್ದಾರೆ. ಧಾರವಾಡ ತಾಲೂಕಿನ ಶಿಂಗನಹಳ್ಳಿ ಗ್ರಾಮದಲ್ಲಿ ಸಾಮಾನ್ಯ ಕುಟುಂಬ ದಲ್ಲಿ ಜನಿಸಿದ ರಫೀಕ್ ಹೋಳಿ ಅವರಿಗೆ ಮೊದಲಿನಿಂದಲೂ ಕುಸ್ತಿ ಎಂದರೆ ಪಂಚಪ್ರಾಣ.

 

ತಂದೆ ರಾಜಾಸಾಬ ಮತ್ತು ತಾಯಿ ಫಾತಿಮಾ ಕೃಷಿ ಕೂಲಿ ಮಾಡಿ ಜೀವನ ಸಾಗಿಸಿದವರು.ಈ ದಂಪತಿಯ ಕೊನೆಯ ಮಗ ಪ್ರಾಥಮಿಕ ವಿದ್ಯಾ ಭ್ಯಾಸವನ್ನು ಧಾರವಾಡದ ಸರಕಾರಿ ಶಾಲೆಯಲ್ಲಿ ಮುಗಿಸಿದ ರಫೀಕ್ ಹೈಸ್ಕೂಲ್ ವಿದ್ಯಾಭ್ಯಾಸ ವನ್ನು ಬೆಳಗಾವಿಯಲ್ಲಿ ಮುಗಿಸಿದರು ಬಳಿಕ ದಾವಣಗೇರಿಯಲ್ಲಿ ಪಿಯುಸಿ ಮುಗಿಸಿ ರಫೀಕ್ ಅಷ್ಟೊತ್ತಿಗೆ ಕುಸ್ತಿಯಲ್ಲಿ ಪರಿಣಿತಿಯನ್ನು ಹೊಂದಿ ದ್ದರು.

 

ಇದೇ ವೇಳೆ ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಜ್ಯೂನಿಯರ್ ನ್ಯಾಷನಲ್ ರಸ್ಲಿಂಗ್ ಚಾಂಪಿ ಯನ್ ಶಿಪ್ ಭಾಗವಹಿಸಿದ ಚಿನ್ನದ ಪದಕವನ್ನು ತಮ್ಮ ಮುಡಿಗೆ ಹಾಕಿಕೊಂಡರು.ರಫೀಕ್ ಹೋಳಿ ಅವರು ಕುಸ್ತಿ ತರಬೇತಿ ಪಡೆದಿದ್ದು ಮನೆಯಿಂ ದಲೇ ಏಕೆಂದರೆ ಅವರ ತಂದೆ ರಾಜಾಸಾಬ್ ಒಳ್ಳೆಯ ಕುಸ್ತಿಪಟು ಆಗಿದ್ದರು ಇನ್ನು ಇಬ್ಬರು ಅಣ್ಣಂದಿರು ಕೂಡ ಒಳ್ಳೆಯ ಕುಸ್ತಿಪಟುಗಳೇ ಅಲ್ಲದೇ ಹುಟ್ಟಿದೂರು ಶಿಂಗನಹಳ್ಳಿ ಗ್ರಾಮದಲ್ಲಿ ಮನೆಗೊಬ್ಬರು ಪೈಲ್ವಾನರು ಇದ್ದಾರೆ ಹೀಗಾಗಿ ಆರಂಭದಿಂದಲೂ ಕುಸ್ತಿಯಾಟ ರಫೀಕ್ ಮನಸ್ಸಿನ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು

 

ಇದೇ ವೇಳೆ ರಫೀಕ್ ಅಣ್ಣ ರೆಹಮಾನ್ ಹೊಳಿ ಸಹೋದರನಿಗೆ ಸಾಕಷ್ಟು ಪ್ರೋತ್ಸಾಹ ನೀಡಿದರು. ತರಬೇತಿಯಿಂದ ಹಿಡಿದು ಕುಸ್ತಿಗೆ ಬೇಕಾಗಿರುವ ಎಲ್ಲ ಸೌಲಭ್ಯಗಳ ವ್ಯವಸ್ಥೆ ಮಾಡಿದರು. ಇದರಿಂ ದಾಗಿ ರಫೀಕ್ ಹೊಳಿ ಅವರಿಗೆ ಕುಸ್ತಿಯಾಟದ ಮೇಲೆ ಸಾಕಷ್ಟು ಹಿಡಿತ ಬಂತು ರಫೀಕ್‌ ಹೋಳಿ 2015ರ ಅಮೆರಿಕಾದ ಲಾಸ್‌ ವೇಗಸ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದರು.

 

ರಫೀಕ್‌ 2009ರಲ್ಲಿ ಫಿಲಿಫೈನ್ಸ್‌ನಲ್ಲಿ ನಡೆದ ಜೂನಿಯರ್‌ ಏಷಿಯನ್‌ ಚಾಂಪಿಯನ್ ಶಿಪ್ ನಲ್ಲಿ 66 ಕೆಜಿ ವಿಭಾಗದಲ್ಲಿ 5ನೇ ಸ್ಥಾನ ಪಡೆದರು 2015ರಲ್ಲಿ ಕಜಕಿಸ್ತಾನದಲ್ಲಿ ನಡೆದ 71 ಕೆಜಿ ವಿಭಾಗದ ಕುಸ್ತಿ ಚಾಂಪಿಯನ್‌ ಶಿಪ್‌ನಲ್ಲಿ 3ನೇ ಸ್ಥಾನ ಪಡೆದು 2016ರಲ್ಲಿ ಸಿಂಗಾಪುರದಲ್ಲಿ ನಡೆದ ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಪಡೆದಿರುವ ಇವರ ಸಾಧನೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.