ಬೆಂಗಳೂರು –
10/6/2021 ರಂದು ಮಾನ್ಯ ಆಯುಕ್ತರು ಸಾ.ಶಿ.ಇ ಬೆಂಗಳೂರು ಅವರು ಜೂನ್ 15 ರಿಂದ ದಾಖಲಾತಿ ಹಾಗೂ ಪೂರ್ವಸಿದ್ಧತೆ ಮಾಡಿಕೊಳ್ಳಲು ಸುತ್ತೋಲೆ ಯನ್ನು ಹೊರಡಿಸಿದ್ದಾರೆ.
ಆದರೆ ಮರುದಿನ 11/6/2021 ರಂದು ರಾಜ್ಯ ಸರ್ಕಾರದ ಕಾರ್ಯದರ್ಶಿಗಳು 21/6/2021 ರವರೆಗೆ 11 ಜಿಲ್ಲೆಗಳಲ್ಲಿ ಲಾಕ್ ವಿಸ್ತರಿಸಿ ಆದೇಶಿ ಸಿದ್ದು ಇನ್ನುಳಿದ ಜಿಲ್ಲೆಗಳಿಗೆ ಪರಿಷ್ಕೃತ ಮಾರ್ಗಸೂ ಚಿಗಳನ್ನು ಪ್ರಕಟಿಸಿರುತ್ತಾರೆ.ಈ ಮಾರ್ಗಸೂಚಿಯಲ್ಲಿ ಕೆಲವು ಇಲಾಖೆಗಳು 50% ನೌಕರರ ಹಾಜರಾತಿ ಯೊಂದಿಗೆ ಮಾತ್ರ ಕಾರ್ಯ ನಿರ್ವಹಿಸಲು ಆದೇಶಿ ಸಿದ್ದಾರೆ.
ಅಂದರೆ ಶಿಕ್ಷಣ ಇಲಾಖೆಯಲ್ಲಿ ನೌಕರರು/ ಶಿಕ್ಷಕರು ಕಾರ್ಯ ನಿರ್ವಹಿಸಲು ಅವಕಾಶವಿಲ್ಲ.ರಾಜ್ಯ ಸರ್ಕಾ ರದ ಮುಖ್ಯ ಕಾರ್ಯದರ್ಶಿಗಳ ಸೂಚನೆಗಳನ್ವಯ ಶಿಕ್ಷಣ ಇಲಾಖೆಯೂ ಸೇರಿದಂತೆ ಹಲವಾರು ಇಲಾ ಖೆಗಳು ಕಚೇರಿಗಳನ್ನು ತೆರೆಯಲು ಕಾರ್ಯನಿರ್ವ ಹಿಸಲು ಅವಕಾಶ ನೀಡಲಾಗಿಲ್ಲ.
ದಿನಾಂಕ 10/6/2021 ರಂದು ಮಾನ್ಯ ಆಯುಕ್ತರು ಸಾ.ಶಿ.ಇ ಇವರು ಹೊರಡಿಸಿದ ಮಾರ್ಗಸೂಚಿಗಳ ಸುತ್ತೋಲೆಯಲ್ಲಿ ಕಾಲ ಕಾಲಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತಗಳು ಹೊರಡಿಸುವ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಸೂಚಿಸ ಲಾಗಿದೆ.
ದಿನಾಂಕ 11/6/2021 ರಂದು ರಾಜ್ಯ ಸರ್ಕಾರವು ಹೊರಡಿಸಿದ ಆದೇಶವನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಲೇಬೇಕು.
ಹೀಗಾಗಿ 21/6/2021 ರವರೆಗೆ ಶಿಕ್ಷಕರು ಶಾಲೆಗಳಿಗೆ ತೆರಳಿ ಕರ್ತವ್ಯ ನಿರ್ವಹಿಸಬೇಕಾಗಿಲ್ಲ.ಅಲ್ಲವೇ??