ಮೈಸೂರು –
ಪರೀಕ್ಷೆ ಯಲ್ಲಿ ಅಕ್ರಮವನ್ನು ಮಾಡಿದ ಆರೋಪದ ಮೇಲೆ ತಲೆ ಮರೆಸಿಕೊಂಡಿದ್ದ ಇಬ್ಬರು ವಿದ್ಯಾರ್ಥಿ ಗಳನ್ನು ಮೈಸೂರಿನಲ್ಲಿ ಬಂಧನ ಮಾಡಲಾಗಿದೆ ಹೌದು ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಪರೀಕ್ಷೆ ಬರೆದು ತಲೆಮರೆಸಿಕೊಂಡಿದ್ದ ಇಬ್ಬರು ವಿದ್ಯಾರ್ಥಿ ಗಳಾದ ಚೇತನ್ ಮತ್ತು ಚಂದನ್ ಎಂಬವರನ್ನು ಸಿಸಿಬಿ ಪೊಲೀಸರು ಕೆ.ಆರ್.ಪೇಟೆಯಲ್ಲಿ ಬಂಧಿಸಿ ದ್ದಾರೆ.
ಮೈಸೂರು ವಿವಿಯಲ್ಲಿ ಏ.15 ಮತ್ತು 17 ರಂದು ನಡೆದ ಬಿಎಸ್ಸಿ ರಸಾಯನಶಾಸ್ತ್ರ ಪರೀಕ್ಷೆಯನ್ನು ಎದುರಿಸದ ಕೆಲ ವಿದ್ಯಾರ್ಥಿಗಳು ವಿವಿಯ ಸಿಬ್ಬಂದಿ ಯೊಂದಿಗೆ ಸೇರಿ ನಕಲಿ ಉತ್ತರ ಪತ್ರಿಕೆ ತಯಾರಿಸ ಲು ಮಂಡಿ ಠಾಣೆ ವ್ಯಾಪ್ತಿಯ ಬ್ಲೂ ಡೈಮಂಡ್ ಲಾಡ್ಜ್ ಅನ್ನು ಆಯ್ಕೆ ಮಾಡಿಕೊಂಡಿದ್ದರು.
ಸೋಮಸುಂದರ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಅವರ ಆದೇಶದ ಮೇರೆಗೆ ಪಿಐ ನಾರಾಯಣ ಸ್ವಾಮಿ 6 ಜನರ ವಿರುದ್ಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಗತನಿಖೆ ಆರಂಭಿಸಿದ್ದ ಪೊಲೀಸರು ತಲೆ ಮರೆಸಿ ಕೊಂಡಿದ್ದ ವಿದ್ಯಾರ್ಥಿಗಳನ್ನು ಸೋಮವಾರ ಕೆ.ಆರ್ ಪೇಟೆಯ ಮನೆಯೊಂದರಲ್ಲಿ ಬಂಧಿಸಿದ್ದಾರೆ.ಇವರು ಕೆ.ಆರ್.ಪೇಟೆಯವರೇ ಎಂದು ತಿಳಿದು ಬಂದಿದೆ.ಈ ವಿಚಾರ ತಿಳಿದು ಮಂಡಿ ಠಾಣೆ ಪಿಐ ನಾರಾಯಣ ಸ್ವಾಮಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದರು. ಆದರೆ ಎಫ್‌ಐಆರ್ ದಾಖಲಿಸಿರಲಿಲ್ಲ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರು