ಹುಣಸೂರು –
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹುಣ ಸೂರಿನಲ್ಲಿ ಶಿಕ್ಷಕರಿಗೆ ಕೋವಿಡ್ ಲಸಿಕಾ ಕಾರ್ಯಕ್ರ ಮವನ್ನು ಹಮ್ಮಿಕೊಳ್ಳಲಾಗಿತ್ತು.ನಗರದ ಗುರುಭವ ನದಲ್ಲಿ ಹಮ್ಮಿಕೊಂಡಿದ್ದ ಈ ಒಂದು ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ರವರು ಚಾಲನೆ ನೀಡಿದರು.
ಸರಿಯಾಗಿ ಅಚ್ಚುಕಟ್ಟಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯವರು ಮಾಡಬೇಕಾಗಿತ್ತು ಆದರೆ ಯಾವು ದನ್ನೂ ಸರಿಯಾಗಿ ಮಾಡದ ಕಾರಣಕ್ಕಾಗಿ ಶಿಕ್ಷಕರು ಲಸಿಕೆ ಪಡೆಯಲು ಮುಗಿ ಬಿದ್ದ ಚಿತ್ರಣ ದೃಶ್ಯ ಕಂಡು ಬಂದಿತು.ನಾ ಮುಂದು ನೀ ಮುಂದು ನನಗೆ ನನಗೆ ಎನ್ನುತ್ತಾ ಲಸಿಕೆ ತಗೆದುಕೊಳ್ಳಲು ಬಂದ ಶಿಕ್ಷಕರು ಮುಗಿ ಬಿದ್ದು ಏನೇಲ್ಲಾ ಹರಸಹಾಸ ಪಟ್ಟು ಲಸಿಕೆ ಯನ್ನು ತಗೆದುಕೊಂಡ ಚಿತ್ರಣ ಇಲ್ಲಿ ಕಂಡು ಬಂದಿತು ಅತ್ತ ಅಧಿಕಾರಿಗಳು ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಂತೆ ಆರಂಭಗೊಂಡ ಲಸಿಕಾ ಕಾರ್ಯಕ್ರಮದಲ್ಲಿ ಬಿಇಒ ಹೊರಟಿದ್ದೆ ತಡ ಅಲ್ಲಿಂದ ಅವರು ಹೊರಟು ಹೋಗುತ್ತಿದ್ದಂತೆ ನನಗೆ ಮೊದಲು ಲಸಿಕೆ ನೀಡಿ ಎಂದು ದುಂಬಾಲು ಬೀಳುತ್ತಿದ್ದುದ್ದು ಕಂಡು ಬಂದಿತು
ಇಲ್ಲಿ ಯಾವುದೇ ಸಾಮಾಜಿಕ ಅಂತರವೂ ಇಲ್ಲದೆ ಆರೋಗ್ಯ ಇಲಾಖೆ ಸಿಬ್ಬಂದಿಗಳ ಎಚ್ಚರಿಕೆಯೂ ಇಲ್ಲದೆ ಮುಗಿ ಬೀಳುತ್ತಿದ್ದುದ್ದನ್ನು ಕಂಡ ಸಾರ್ವಜನಿ ಕರೇ ವಿರೋಧ ವ್ಯಕ್ತಪಡಿಸಿದರು.ಹೀಗ್ಯಾಕೆ ಇವರು ಮಾಡತಾ ಇದ್ದಾರೆ ಎಂದರು.ಅಲ್ಲದೇ ಸರಿಯಾಗಿ ವ್ಯವಸ್ಥೆಯನ್ನು ಹಾಗೇ ಅಚ್ಚುಕಟ್ಟುತನವನ್ನು ಮಾಡದ ಇಲಾಖೆಯ ವಿರುದ್ದ ಶಿಕ್ಷಕರು ಹಿಡಿಶಾಪ ವನ್ನು ಹಾಕಿದ್ದು ಕಂಡು ಬಂದಿತು.ಇನ್ನೂ ಮುಖ್ಯ ವಾಗಿ ತಾಲೂಕಿನಲ್ಲಿ 32 ಇಲಾಖೆಗಳು ಕಾರ್ಯನಿ ರ್ವಹಿಸುತ್ತಿದ್ದು.ಎಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿ ಕೊಂಡಿದ್ದಾರೆ. ಯಾರಿಗೂ ಸೊಂಕು ಹರಡುವುದಿಲ್ಲ. ಆತಂಕಬೇಡ ಲಸಿಕಾ ಅಭಿಯಾನಕ್ಕೆ ಸಹಕಾರ ನೀಡುವಂತೆ ಎಲ್ಲರಲ್ಲಿಯೂ ಹೇಳಿದರು.