ವಿಜಯಪುರ –

ಬಿಐಇಆರ್ ಟಿ ಯೋಜನೆಯಡಿಯಲ್ಲಿ 13 ವಿಶೇಷ ಶಿಕ್ಷಕರ ಹುದ್ದೆಗಳಿಗೆ ಶಿಕ್ಷಕರ ನೇಮಕಾತಿಗಾಗಿ ವಿಜಯಪುರ ಡಿಡಿಪಿಐ ಕಚೇರಿಯ ಗುಮಾಸ್ತ ವಿಜಯಕುಮಾರ್ ಪವಾರ್ ಶಿಕ್ಷಕರೊಬ್ಬರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಈ ಕುರಿತು ಎಸಿಬಿ ಅವರಿಗೆ ಶಿಕ್ಷಕ ಸತೀಶ್ ಎಂಬುವರು ದೂರನ್ನು ನೀಡಿದ್ದರು.ದೂರಿನ ಹಿನ್ನಲೆಯಲ್ಲಿ ಎಸಿಬಿ ಎಸ್ಪಿ ಬಿ ಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಇಂದು ಮಧ್ಯಾಹ್ನ ದಾಳಿ ಮಾಡಿ ಟ್ರ್ಯಾಪ್ ಮಾಡಲಾಗಿತ್ತು.25000 ಸಾವಿರ ರೂಪಾಯಿ ಹಣದೊಂದಿಗೆ ಕಚೇರಿ ಯಲ್ಲಿ ಎಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ.

25000 ಸಾವಿರ ಹಣದೊಂದಿಗೆ ವಶಕ್ಕೆ ತೆಗೆದು ಕೊಂಡು ತನಿಖೆಗೆ ಇಳಿದ ಎಸಿಬಿ ಅಧಿಕಾರಿಗಳಿಗೆ ಮತ್ತೆ ಕಂತೆ ಕಂತೆ ನೋಟುಗಳು ವಿಜಯಕುಮಾರ್ ಜೇಬಿನಲ್ಲಿ ಸಿಕ್ಕಿವೆ.50 ಸಾವಿರಕ್ಕೂ ಹೆಚ್ಚು ಹಣ ಸಿಕ್ಕಿದ್ದು ಎಸಿಬಿ ಅಧಿಕಾರಿಗಳಾದ ಡಿವೈಎಸ್ಪಿ ಮಂಜುನಾಥ ದಂಗಲ್,ಇನ್ಸ್ಪೇಕ್ಟರ್ ಅಧಿಕಾರಿಗಳಾ ದ ಪರಮೇಶ ಕವಟಗಿ ಮತ್ತು ಚಂದ್ರಕಲಾ ಸೇರಿ ದಂತೆ ಸಿಬ್ಬಂದಿಗಳು ಶಾಕ್ ಆಗಿದ್ದಾರೆ.ಬೆಳ್ಳಂ ಬೆಳಿಗ್ಗೆ ಇಷ್ಟೊಂದು ಪ್ರಮಾಣದಲ್ಲಿ ಹಣ ಇವರ ಬಳಿ ಹೇಗೆ ಬಂದಿದ್ದು ಇದೊಂದು ದೊಡ್ಡ ತಿಮಿಂಗಲು ಇದೆ ಎಂದುಕೊಂಡಿರುವ ಎಸಿಬಿ ಅಧಿಕಾರಿಗಳು ತನಿಖೆ ಯನ್ನು ಮುಂದುವರೆಸಿದ್ದಾರೆ.ಒಟ್ಟಾರೆ ಜಿಲ್ಲೆಯ ಶಿಕ್ಷಕರಿಗೆ ದೊಡ್ಡ ತಲೆನೋವಿನ ಅಧಿಕಾರಿಯಾಗಿದ್ದ ಇವರು ಟ್ರ್ಯಾಪ್ ನಿಂದಾಗಿ ಅದೇಷ್ಟೋ ಶಿಕ್ಷಕರು ಸಂತಸಗೊಂಡಿದ್ದಾರೆ