ಬೆಂಗಳೂರು –
ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣಕ್ಕೆ ಹೊಸದೊಂದು ಟ್ವೀಸ್ಟ್ ಸಿಕ್ಕಿದೆ. ನಿನ್ನೇ ಅಪಹರಣಕಾರರಿಂದ ಬಿಡುಗಡೆಯಾಗಿ ಬಂದ ಬೆನ್ನಲ್ಲೇ ಇಂದು ಈ ಒಂದು ಪ್ರಕರಣಕ್ಕೇ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಿಡ್ನಾಪ್ ಮಾಡಿದ ಕಾರಿನಲ್ಲಿ ಮಹಿಳೆಯೊಬ್ಬರಿಗೆ ಸೇರಿದ ವೇಲ್ ಮಾದರಿಯ ಬಟ್ಟೆ ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ನವೆಂಬರ್ 25 ರಂದು ಕೋಲಾರದಲ್ಲಿ ಅಪಹರಣಕ್ಕೀಡಾಗಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್, ಐದಾರು ದಿನಗಳ ಕಾಲ ದೂರು ನೀಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ವರ್ತೂರು ಪ್ರಕಾಶ್ ಕಾರು ಚಾಲಕ ಕೂಡ ಯಾವುದೇ ದೂರು ದಾಖಲಿಸಿಲ್ಲ. ಇನ್ನೊಂದು ವಿಚಾರವೆಂದರೆ ಕೋಲಾರದಲ್ಲಿ ದೂರು ನೀಡದೇ ಬೆಂಗಳೂರಿನಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿರುವುದು ಕೂಡ ಹಲವು ಅನುಮಾನಕ್ಕೆ ಕಾರಣ ಎನ್ನಲಾಗಿದೆ.ಇನ್ನೂ ಇವೆಲ್ಲದರ ನಡುವೆ ವರ್ತೂರು ಅವರನ್ನು ಅಪರಣ ಮಾಡಿರುವುದರ ಹಿಂದೆ ಮಹಿಳೆಯೊಬ್ಬರ ಕೈವಾಡವಿದ್ದು, ಮಾಜಿ ಸಚಿವರು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.
ಅಲ್ಲದೇ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿದ್ದ ಕಾರಿನಲ್ಲಿ ವೇಲ್ ಮಾದರಿಯ ಬಟ್ಟೆ ಪತ್ತೆಯಾಗಿದ್ದು, ಪ್ರಕರಣ ಮತ್ತಷ್ಟು ಟ್ವಿಸ್ಟ್ ಸಿಗುವ ಸಾಧ್ಯತೆ ಇದ್ದು, ಹುಡುಗಿ ವಿಚಾರಕ್ಕೆ ಕಿಡ್ನಾಪ್ ಮಾಡಲಾಗಿದೆ ಎನ್ನುವ ಅನುಮಾನಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು ಯಾವ ಕಾರಣಕ್ಕಾಗಿ ಇವರನ್ನು ಅಪಹರಣ ಮಾಡಲಾಗಿದೆ ಎಂಬ ವಿಚಾರ ಪೊಲೀಸರ ತನಿಖೆಯಿಂದ ಹೊರಬರಬೇಕಿದೆ. ಇತ್ತ ತಮ್ಮನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಲಾಗಿತ್ತು ಎಂದು ವರ್ತೂರು ಪ್ರಕಾಶ್ ಅವರು ನಿನ್ನೆ ಪೊಲೀಸರಿಗೆ ದೂರು ನೀಡಿದ್ದು ಇವೆಲ್ಲದರ ನಡುವೆ ಅಪಹರಣದ ಸತ್ಯಾಸತ್ಯತೆ ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.