ಬೆಂಗಳೂರು –
ರಾಜ್ಯದಲ್ಲಿ ಸಧ್ಯ ಸರ್ಕಾರ ಶಾಲೆಯ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಆರಂಭ ಮಾಡಿದೆ. ಇದರೊಂದಿಗೆ ಮಕ್ಕಳಿಗೆ ನಿರಂತರವಾಗಿ ಪಾಠಗಳನ್ನು ಆಲಿಸುವ ಕುರಿತಂತೆ ಡಿಡಿ ಚಂದನ ಟಿವಿ ಯಲ್ಲಿ ವರ್ಗವಾರು ಕ್ಲಾಸ್ ಗಳನ್ನು ಆರಂಭ ಮಾಡಿದ್ದು ಈ ಕುರಿತಂತೆ ರಾಜ್ಯದ ಎಲ್ಲಾ ಸರ್ಕಾರಿ ಶಿಕ್ಷಕರು ಕಾಲಿಗೆ ಚಕ್ರವನ್ನು ಕಟ್ಟಿಕೊಂಡವರಂತೆ ಮಕ್ಕಳ ಮನೆ ಮನೆಗೆ ತೆರಳಿ ಚಂದನ ಟಿವಿ ಯಲ್ಲಿನ ಪಾಠಗಳ ವೇಳಾಪಟ್ಟಿ ಹಾಗೇ ಆನ್ ಲೈನ್ ಕ್ಲಾಸ್ ಗಳ ಕುರಿತಂತೆ ಹೇಳುತ್ತಿದ್ದಾರೆ.
ಇದು ಒಂದು ವಿಚಾರವಾದರೆ ಇದಕ್ಕಿಂದ ದೊಡ್ಡ ಸಮಸ್ಯೆಯಾಗಿರೊದು ಗ್ರಾಮೀಣ ಪ್ರದೇಶದ ಬಹುತೇಕ ಮಕ್ಕಳಿಗೆ ಸ್ಮಾರ್ಟ್ ಪೊನ್ ಗಳೇ ಇಲ್ಲ. ಒಂದು ಕಡೆಗೆ ಸ್ಮಾರ್ಟ್ ಪೊನ್ ಗಳ ಕೊರತೆ ಮತ್ತೊಂದು ಕಡೆಗೆ ಟಿವಿ ಗಳ ಸಮಸ್ಯೆ ಇದರೊಂದಿಗೆ ಸರಿಯಾದ ಸಮಯಕ್ಕೆ ಇರದ ವಿದ್ಯುತ್ ಹೀಗಿರು ವಾಗ ದೊಡ್ಡದಾದ ಸಮಸ್ಯೆಯನ್ನು ಶಿಕ್ಷಕರು ಎದುರಿ ಸುತ್ತಿದ್ದಾರೆ.ಕಳೆದ ಮೂರು ನಾಲ್ಕು ದಿನಗಳಿಂದ ಈ ಕುರಿತಂತೆ ಮನೆ ಮನೆಗೆ ತೆರಳಿದ ಶಿಕ್ಷಕರಿಗೆ ಇದೇ ಸಮಸ್ಯೆಗಳು ಕುಂಡು ಬರುತ್ತಿದ್ದು ಇನ್ನೂ ಸ್ಮಾರ್ಟ್ ಪೊನ್ ಗಳಿದ್ದರೂ ಕೂಡಾ ಆ ಪೊನ್ ಗಳನ್ನು ಮಕ್ಕಳಿಗೆ ನೀಡದೆ ಪೋಷಕರು ತಗೆದುಕೊಂಡು ಹೋಗುತ್ತಿದ್ದು ಹೀಗಾಗಿ ಮಕ್ಕಳ ಕಲಿಕೆ ಕುಂಠಿತವಾಗ ಬಾರದು ಎಂಬ ಒಂದೇ ಒಂದು ಕಾರಣಕ್ಕಾಗಿ ನಾಡಿನ ತುಂಬೆಲ್ಲಾ ಗ್ರಾಮೀಣ ಪ್ರದೇಶದಲ್ಲಿನ ಶಿಕ್ಷಕರು ಬಿಡುವಿಲ್ಲದೇ ಮನೆ ಮನೆಗೆ ತೆರಳಿ ಈ ಕುರಿತಂತೆ ಮಾಹಿತಿಯನ್ನು ನೀಡುತ್ತಿದ್ದಾರೆ.
ಇದು ಶಿಕ್ಷಕರ ಪ್ರಮುಖವಾದ ಕರ್ತವ್ಯವಾದರೆ ಇನ್ನೂ ಪ್ರಮುಖವಾಗಿ ಸರ್ಕಾರ ಶಿಕ್ಷಣ ಇಲಾಖೆಯ ದೊಡ್ಡ ಜವಾಬ್ದಾರಿ ಪ್ರತಿಯೊಬ್ಬ ಮಗುವಿಗೂ ಆನ್ ಕ್ಲಾಸ್ ಇಲ್ಲವೇ ಟಿವಿ ಯಲ್ಲಿನ ಪಾಠ ತಲುಪುವಂತೆ ಮಾಡೊದು ಸಧ್ಯ ಇದು ಕಷ್ಟ ಸಾಧ್ಯವಾದ ಮಾತು. ಕಳೆದ ವಾರವಷ್ಟೇ ರಾಜ್ಯದ ಕೆಲ ವರ್ಗಗಳ ವಿದ್ಯಾರ್ಥಿಗಳಿಗೆ ಟ್ಯಾಬ್ ಗಳನ್ನು ನೀಡಲಾಯಿತು. ಅದರಂತೆ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಏನಾದರೂ ಮಾಡಿ ವ್ಯವಸ್ಥೆ ಮಾಡಬೇಕು ಇಲ್ಲವಾ ದರೆ ಇದನ್ನೇಲ್ಲವನ್ನು ಬಿಟ್ಟು ನಾಳೆಯಿಂದಲೇ ಕ್ಲಾಸ್ ಗಳನ್ನು ಆರಂಭ ಮಾಡಬೇಕು.ಸಾಮಾಜಿಕ ಅಂತರ ದೊಂದಿಗೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕಡಿಮೆ ಮಾಡಿ ಎರಡು ಮೂರು ಬ್ಯಾಚ್ ಗಳನ್ನು ಮಾಡಿ ಸಮಯವನ್ನು ಕಡಿಮೆ ನಿಗದಿ ಮಾಡಿ ವರ್ಗಗಳನ್ನು ಆರಂಭ ಮಾಡಿ ಎಂಬ ಕೂಗನ್ನು ನಾಡಿ ಮೂಲೆ ಮೂಲೆಗಳಿಂದ ಶಿಕ್ಷಕರು ಒತ್ತಾಯವನ್ನು ಮಾಡುತ್ತಿ ದ್ದಾರೆ. ಈ ಒಂದು ದೊಡ್ಡ ಸಮಸ್ಯೆಗಿಂದ ಕ್ಲಾಸ್ ಆರಂಭ ಮಾಡೊದೆ ಉತ್ತಮವಾದ ದಾರಿ ಮಾರ್ಗ ಎಂಬ ಅಭಿಪ್ರಾಯವನ್ನು ನಾಡಿನ ಶಿಕ್ಷಕರು ಸರ್ಕಾ ರದ ಶಿಕ್ಷಣ ಇಲಾಖೆಯ ಮುಂದಿಟ್ಟು ಹೀಗೆ ಮಾಡಿ ದರೆ ಸಮಸ್ಯೆ ಪರಿಹಾರವಾಗಿ ಮಕ್ಕಳಿಗೆ ಶಿಕ್ಷಣ ತಲುಪುತ್ತದೆ ಅಂದಾಗ ಸಾರ್ಥಕವಾಗುತ್ತದೆ ಎಂಬ ಮಾತನ್ನು ಶಿಕ್ಷಕರು ಹೇಳಿದ್ದು ಏನಾಗುತ್ತದೆ ಎಂಬು ದನ್ನು ಕಾದು ನೋಡಬೇಕು.