ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿ ಅದ್ದೂರಿಯಾಗಿ ನಡೆಯಿತು ರೋಡ್ ಶೋ……

Suddi Sante Desk
ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿ ಅದ್ದೂರಿಯಾಗಿ ನಡೆಯಿತು ರೋಡ್ ಶೋ……

ಹುಬ್ಬಳ್ಳಿ

ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸಿದರು.ವಿಶೇಷ ವಿಮಾನದ ಮೂಲಕ ನಗರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹುಬ್ಬಳ್ಳಿ ವಿಮಾನ‌ ನಿಲ್ದಾಣ ದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯಪಾಲರು ಮುಖ್ಯಮಂತ್ರಿ ಸೇರಿದಂತೆ ಗಣ್ಯಾತಿ ಗಣ್ಯರು ಬರಮಾಡಿಕೊಂಡರು.

ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ರೋಡ್ ಶೋ ಆರಂಭಗೊಂಡಿತು.ಎಂಟು ಕಿಲೋಮೀ ಟರ್ ಗಳವರೆಗೆ ರೋಡ್ ಶೋ ಮೂಲಕ ಆಗಮಿಸಿ ಕಾರ್ಯಕ್ರಮದ ಮುಖ್ಯವೇದಿಕೆಗೆ ಆಗಮಿಸಿದರು

 

ಇದೇ ವೇಳೆ ದಾರಿ ಉದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಕಿಕ್ಕಿರಿದ ಜನಸ್ತೋಮ ಮೋದಿ ಮೋದಿ ಎನ್ನುತ್ತಾ ಸ್ವಾಗತಿಸಿದ್ದು ಘೋಷಣೆ ಕೂಗಿದ್ದು ಕಂಡು ಬಂದಿತು.

ಅಪಾರ ಸಂಖ್ಯೆಯ ಜನಸ್ತೋಮ ಪಕ್ಷದ ಕಾರ್ಯಕರ್ತರು ಮುಖಂಡರು ಈ ಒಂದು ರೋಡ್ ಶೋ ಗೆ ಸಾಕ್ಷಿಯಾದರು.ರೋಡ್ ಶೋ ಗೆ ಸಾಕಷ್ಟು ಪ್ರಮಾಣದಲ್ಲಿ ಜನಸ್ತೋಮ ರಸ್ತೆಯ ಅಕ್ಕ ಪಕ್ಕದಲ್ಲಿ ನಿಂತಿದ್ದು ಕಂಡು ಬಂದಿತು.

 

ಚಕ್ರವರ್ತಿ ಜೊತೆಗೆ ಮಂಜುನಾಥ ಸರ್ವಿ ಪರಶುರಾಮ ಗೌಡರ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.