ಕುಂದಗೋಳ –
ಕುಂದಗೋಳ ವಿಧಾನ ಸಭಾ ಕ್ಷೇತ್ರದ ಶಾಸಕ MR ಪಾಟೀಲ್ ಅವರು ಏನೇ ಕೆಲಸ ಕಾರ್ಯಗಳನ್ನು ಮಾಡಿದ್ರು ತುಂಬಾ ವಿಶೇಷವಾಗಿ ಇರುತ್ತವೆ ಹೌದು ಪ್ರತಿಯೊಂದು ಕೆಲಸ ಕಾರ್ಯಗಳನ್ನು ತುಂಬಾ ವಿಭಿನ್ನ ವಿಶೇಷವಾಗಿ ಮಾಡುತ್ತಾ ಕ್ಷೇತ್ರದಲ್ಲಿ ಜನ ಸೇವೆ ಯನ್ನು ಮಾಡುತ್ತಿರುವ ಇವರು ಈಗ ಮತ್ತೊಂದು ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ ಹೌದು
ಕುಂದಗೋಳ ಪಟ್ಟಣದಲ್ಲಿ ಹಣ್ಣು ವ್ಯಾಪಾರಿಗಳ ಬಳಿ ತೆರಳಿ ಹಣ್ಣುಗಳನ್ನು ಖರೀದಿಸಿದ ಶಾಸಕರು ವ್ಯಾಪಾರಿಗಳ ಯೋಗ ಕ್ಷೇಮವನ್ನು ವಿಚಾರಿಸಿ ಅವರ ಸಮಸ್ಯೆಗಳು ಹಾಗೂ ಅಭಿಪ್ರಾಯ ಗಳನ್ನು ಆಲಿಸಿ ಆತ್ಮೀಯವಾಗಿ ಮಾತುಕತೆ ನಡೆಸಿ ಗಮನ ಸೆಳೆದರು.ಕಾರ್ಯಕ್ರಮದ ನಡುವೆ ಶಾಸಕರು ಜನ ಸಾಮಾನ್ಯ ರಂತೆ ಪಟ್ಟಣದ ರಸ್ತೆ ಬದಿಯಲ್ಲಿ ಹಣ್ಣುಗಳನ್ನು ಖರೀದಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು
ಹಣ್ಣು ಖರೀದಿಸಿ ನಂತರ ಅವರ ಸಮಸ್ಯೆ ಕುಶಲೋಪರಿ ಯನ್ನು ವಿಚಾರ ಮಾಡಿದ್ದು ವಿಶೇಷವಾಗಿ ಕಂಡು ಬಂದಿತು ಈ ಒಂದು ಸಂದರ್ಭದಲ್ಲಿ ಶಾಸಕರೊಂದಿಗೆ ಪಕ್ಷದ ಕಾರ್ಯಕರ್ತರು ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅನಸೂಯಾ ಸುದ್ದಿ ಸಂತೆ ನ್ಯೂಸ್ ಕುಂದಗೋಳ…..



