ಚಿಕ್ಕಮಗಳೂರು –
ಅವರು ಬೆಳಗಾದರೆ ಎಎಸ್ ಐ ಆಗಿ ಬಡ್ತಿ ಪಡೆದುಕೊಂಡು ಹೆಗಲ ಮೇಲೊಂದು ಸ್ಟಾರ್ ಹಾಕಿಕೊಳ್ಳುತ್ತಾ ಎಲ್ಲರೊಂದಿಗೆ ಸೆಲ್ಯೂಟ್ ಹೊಡೆಸಿಕೊಳ್ಳುತ್ತಿದ್ದರು. ಈ ಒಂದು ಆಸೆಯನ್ನು ಇಟ್ಟುಕೊಂಡು ಎಂದಿನಂತೆ ಇಂದು ಕರ್ತವ್ಯಕ್ಕೇ ಬಂದು ಕೆಲಸವನ್ನು ಮುಗಿಸಿಕೊಂಡು ಬೈಕ್ ಮೇಲೆ ಮನೆಯತ್ತ ಹೊರಟಿದ್ದರು. ಇನ್ನೇನು ಸ್ವಲ್ಪು ದೂರ ಹೊದರೆ ಸಾಕು ಮನೆ ಸೇರಿಕೊಳ್ಳತ್ತಿದ್ದರು. ಖುಷಿ ಖುಷಿಯಾಗಿ ಮನೆಯವರೊಂದಿಗೆ ಸೇರಿಕೊಂಡು ಊಟ ಮಾಡಿ ಮತ್ತೇ ನಾಳೆ ಬೆಳಗಾದರೆ ಎಎಸ್ ಐ ಆಗಬೇಕಿದ್ದ ಮುಖ್ಯ ಪೇದೆಯೊಬ್ಬ ಅಪಘಾತದಲ್ಲಿ ಧಾರುಣವಾಗಿ ಸಾವಿಗೀಡಾಗಿದ್ದಾರೆ.
ಹೌದು ಇಂಥಹೊಂದು ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.ಬೈಕ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಪೊಲೀಸ್ ಮುಖ್ಯ ಪೇದೆಯೊಬ್ಬರು ಸಾವಿಗೀಡಾಗಿದ್ದಾರೆ. ಸಿದ್ದರಾಮಪ್ಪ (48) ಮೃತ ಪೊಲೀಸ್ ಪೇದೆಯಾಗಿದ್ದಾರೆ. ನಾಳೆ ಎಎಸ್ ಐ ಆಗಬೇಕಿದ್ದ ಮುಖ್ಯ ಪೇದೆ ಸಿದ್ದರಾಮಪ್ಪ ಇಂದು ಕರ್ತವ್ಯ ಮುಗಿಸಿ ನಾಳೆಯ ಡ್ರೇಸ್ ನ್ನು ಒಮ್ಮೇ ಕಚೇರಿಯಲ್ಲಿ ಹಾಕಿಕೊಂಡು ನಾನು ಇದರಲ್ಲಿ ಹೇಗೆ ಕಾಣ್ತಾ ಇದ್ದೇನಿ ಎಂದು ಸಿಬ್ಬಂದಿಗೆ ತೋರಿಸಿ ಪೊಟೊ ತಗೆಸಿದ್ದರು.
ಮತ್ತೇ ಡ್ರೇಸ್ ತಗೆದಿಟ್ಟು ಮುಖ್ಯ ಪೇದೆಯ ಕೊನೆಯ ದಿನದ ಕರ್ತವ್ಯವನ್ನು ಮುಗಿಸಿ ಮನೆಗೆ ವಾಪಸ್ಸಾಗುವ ವೇಳೆಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ.ಚಿಕ್ಕಮಗಳೂರಿನ ತಾಲೂಕಿನ ಹಿರೇಗೌಜ ಸಮೀಪ ಈ ಒಂದು ಘಟನೆ ನಡೆದಿದೆ.
ಸಿದ್ದರಾಮಪ್ಪ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಕರ್ತವ್ಯ ಮುಗಿಸಿ ಮನೆಗೆ ವಾಪಸ್ಸಾಗುವ ವೇಳೆಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ.ಬೈಕ್ ಗೆ ಕಾರ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮುಖ್ಯಪೇದೆ ಸಿದ್ದರಾಮಪ್ಪ ಸಾವಿಗೀಡಾಗಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಅಪಘಾತದ ವಿಷಯ ತಿಳಿದ ಸಖರಾಯಪಟ್ಟಣದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದ್ದಿಗಳು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದರು. ಅಲ್ಲದೇ ಮರಣೋತ್ತರ ಪರೀಕ್ಷೆಯನ್ನು ಸಖರಾಯಪಟ್ಟಣದ ಸಿಬ್ಬಂದ್ದಿಗಳು ಮಾಡಿಸಿ ನಂತರ ಕುಟುಂಬದವರಿಗೆ ಒಪ್ಪಿಸಿದರು. ಇನ್ನೂ ಮುಖ್ಯಪೇದೆಗೆ ನಾಳೆ ಭಡ್ತಿ ಇತ್ತು. ಬೆಳಗಾದರೆ ಹೆಗಲ ಮೇಲೊಂದು ಸ್ಟಾರ್ ಹಾಕಿಕೊಂಡು ಎಎಸ್ ಐ ಆಗುತ್ತಿದ್ದರು.
ಎಂದಿನಂತೆ ಕೆಲಸವನ್ನು ಮುಗಿಸಿ ಮನೆಗೆ ಹೊರಟಿದ್ದ ಪೇದೆಯ ದುರಂತ ಸಾವು ನಿಜಕ್ಕೂ ವಿಷಾದನೀಯ. ಇತ್ತ ಅಪಘಾತದಲ್ಲಿ ಪೇದೆ ಸಾವಿಗೀಡಾದ್ದ ಸುದ್ದಿ ತಿಳಿದು ಚಿಕ್ಕಮಂಗಳೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೇ ಸಖರಾಯಪಟ್ಟಣದ ಸಿಬ್ಬಂದ್ದಿಗಳು ವಿಷಾಧವನ್ನು ವ್ಯಕ್ತಪಡಿಸಿದ್ದಾರೆ.