ಬೆಂಗಳೂರು –
ಬೆಂಗಳೂರಿನ ಖಾಸಗಿ ಶಾಲೆಯ ಮುಂದೆ ಪೋಷಕರ ಪ್ರತಿಭಟನೆ ಮುಂದುವರೆದಿದೆ.ಹೌದು ಖಾಸಗಿ ಶಾಲೆಗಳು ಹಾಗೂ ಪೋಷಕರಿಬ್ಬರ ನಡುವಿನ ಶಾಲಾ ಶುಲ್ಕ ಜಟಾಪಟಿ ಮುಗಿಯುವ ಹಾಗೇ ಕಾಣ್ತಿಲ್ಲ.ಶುಲ್ಕ ನಿಗದಿ ಸಮಿತಿ ರಚಿಸುವಂತೆ ಸದ್ಯ ಕೋರ್ಟ್‌ಗೆ ಸರ್ಕಾರ ಮನವಿ ಮಾಡಿದೆ. ಈ ಮಧ್ಯೆ ಜುಲೈ ಒಂದರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಶುರುವಾಗಿದೆ. ಶಾಲೆಗಳಿಂದ ಹೆಚ್ಚುವರಿ ಶುಲ್ಕ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಿದೆ. ಕೋವಿಡ್ ಕಾರಣದಿಂದ ಭೌತಿಕ ತರಗತಿಗಳು ಶುರುವಾಗದೇ ಇದ್ದರೂ, ಆನ್ ಲೈನ್ ತರಗತಿಗಳು ನಡೆಯುತ್ತಿದೆ.
ಇತ್ತ ಪೋಷಕರು ಕೋವಿಡ್ ಸಂಕಷ್ಟದಲ್ಲಿ ಶುಲ್ಕ ಹೆಚ್ಚಳ ಮಾಡಿರುವುದನ್ನ ಖಂಡಿಸುತ್ತಿದ್ದಾರೆ. ನಗರದ ಹೆಬ್ಬಾಳದಲ್ಲಿರುವ ಜೈನ್ ಹೆರಿಟೇಜ್ ಸ್ಕೂಲ್ ನಲ್ಲಿ ಫೀಸ್ ಟಾರ್ಚರ್ ನೀಡುತ್ತಿದ್ದರೆಂದು ಪೋಷಕರು ಶಾಲಾ ಮುಂಭಾಗವೇ ಪ್ರತಿಭಟನೆ ನಡೆಸುತ್ತಿದ್ದಾರೆ. ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚುವರಿ ಶುಲ್ಕ ಕಟ್ಟುವಂತೆ ಆಡಳಿತ ಮಂಡಳಿಯಿಂದ ಒತ್ತಡ ಬರುತ್ತಿದೆ.ಫೀಸ್ ಕಟ್ಟಿಲ್ಲ ಅಂದರೆ ಆನ್ ಲೈನ್ ಕ್ಲಾಸ್ ಕಡಿತ ಮಾಡುವ ಎಚ್ಚರಿಕೆಯನ್ನ ನೀಡಿದ್ದಾರೆ. ಹೀಗಾಗಿ ಇದರಿಂದ ಬೇಸತ್ತ ಪೋಷಕರು ಧರಣಿ ಕೂತು ಪ್ರಿನ್ಸ್ ಪಾಲ್ ಡೌನ್ ಡೌನ್ ಅಂತಾ ಕೂಗುತ್ತಿದ್ದು ಹೋರಾಟ ವನ್ನು ಮುಂದುವರೆಸಿದ್ದು ಏನಾಗಲಿದೆ ಎಂಬುದನ್ನು ಕಾದು ನೋಡಬೇಕು