ಬೆಂಗಳೂರು –
ರಾಜ್ಯದಲ್ಲಿ ಮತ್ತೊಂದು ದೊಡ್ಡ ಪ್ರಮಾಣದ ಹೋರಾಟ ವೊಂದು ಸಿದ್ದವಾಗುತ್ತಿದೆ.ಹೌದು ಕಳೆದ ಹಲವಾರು ವರ್ಷಗಳಿಂದ ಆವಾಗ ಇವಾಗ ಆಗುತ್ತದೆ ಎಂದುಕೊಂಡು ಕಾದು ಕಾದು ಬೇಸತ್ತ ನಾಡಿನ ಶಿಕ್ಷಕರು ಈಗ ತಾವೇ ಸ್ವತಃ ದೊಡ್ಡ ಪ್ರಮಾಣದ ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ.ಹೌದು ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುತ್ತಿರುವ ಎಲ್ಲರನ್ನೂ ನಂಬಿ ನಂಬಿ ಈವರೆಗೆ ಕಾದು ಕಾದು ಬೇಸತ್ತಿರುವ ಶಿಕ್ಷಕರು ಹೋರಾಟಕ್ಕೆ ಪ್ಲಾನ್ ಮಾಡತಾ ಇದ್ದಾರೆ ಅದು ಹೋರಾಟಕ್ಕೆ ಹೆಸರಾದ ವಾಟಾಳ್ ನಾಗರಾಜ್ ನೇತ್ರತ್ವದಲ್ಲಿ

ಹೌದು ಈಗಾಗಲೇ ಕಾದು ಕಾದು ಬೇಸತ್ತಿರುವ ನಾಡಿನ ಶಿಕ್ಷಕರು ಈಗ ಅಂತಿಮವಾಗಿ ಇದೇ ಒಂದು ನಮಗೆ ದಾರಿ ಎಂದುಕೊಂಡು ತೀರ್ಮಾನ ಮಾಡಿ ವಾಟಾಳ್ ನಾಗರಾಜ್ ನೇತ್ರತ್ವದಲ್ಲಿ ಹೋರಾಟ ಕ್ಕೆ ತೀರ್ಮಾನವನ್ನು ತಗೆದುಕೊಂಡಿದ್ದು ಇದರ ಪೂರ್ವ ಭಾವಿಯಾಗಿ ಇಂದು ವರ್ಚುವಲ್ ಸಭೆಯನ್ನು ಆಯೋಜಿಸಲಾಗಿದೆ.ಸಂಜೆ ನಡೆಯಲಿರುವ ಈ ಒಂದು ಸಭೆಯಲ್ಲಿ ಶಿಕ್ಷಕರೊಂದಿಗಿನ ಸಭೆಯಲ್ಲಿ ವಾಟಾಳ್ ನಾಗರಾಜ್ ಅವರು ಪಾಲ್ಗೊಂಡು ಹೋರಾಟಕ್ಕೆ ಶಕ್ತಿಯ ಮಾತುಗಳನ್ನು ಹೇಳಲಿದ್ದಾರೆ

ಈಗಾಗಲೇ ಇವರ ಬೆಂಬಲದ ಸಂದೇಶದ ಪೊಟೊ ಗಳು ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗಿದ್ದು ಇಂದು ಸಂಜೆ ಹೋರಾಟದ ರೂಪರೇಷೆಗಳನ್ನು ಚರ್ಚೆ ಮಾಡಿ ದಿನಾಂಕ ವನ್ನು ಘೋಷಣೆ ಮಾಡಲಿದ್ದು ಶಿಕ್ಷಕ ಬಂಧುಗಳು ಬೆಂಗಳೂರು ಚಲೋ ಆರಂಭ ಮಾಡುವ ಮುನ್ನ ಅವರ ಸಮಸ್ಯೆ ಗಳಿಗೆ ಶಿಕ್ಷಣ ಸಚಿವರು ಸ್ಪಂದಿಸಿ ಇತ್ಯರ್ಥ ಮಾಡೊದು ಅವಶ್ಯಕತೆ ಇದೆ ಇಲ್ಲವಾದರೆ ಸರ್ಕಾರ ಮತ್ತೊಂದು ದೊಡ್ಡ ಹೋರಾಟವನ್ನು ಎದುರಿಸ ಬೇಕಾಗುತ್ತದೆ.

ತಾವು ಕೂಡಾ ಒರ್ವ ಶಿಕ್ಷಕಿ ಯೊಬ್ಬರ ಮಗನಾಗಿ ರುವ ಸುರೇಶ್ ಕುಮಾರ್ ಅವರು ನಾಡಿನ ಶಿಕ್ಷಕರ ಸಮಸ್ಯೆ ಗಳಿಗೆ ಸ್ಪಂದಿಸುತ್ತಾರೆನಾ ಎಂಬುದನ್ನು ಕಾದು ನೋಡಬೇಕು