ಗದಗ –
ಗದಗ ಜಿಲ್ಲಾ ಆಟೋ ಚಾಲಕರ ಮಾಲಕರ ಸಂಘ ದವರು ವಿಶೇಷವಾದ ಮಾನವೀಯತೆ ಕಾರ್ಯ ವನ್ನು ಮಾಡಿದ್ದಾರೆ.ಹೌದು SSLC ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತರಲು ಗದಗ-ಬೆಟಗೇರಿ ನಗರದಾದ್ಯಂತ ಸುಮಾರು ಒಂದು ನೂರು ಆಟೋಗಳನ್ನು ಉಚಿತ ವಾಗಿ ನೀಡಿದ್ದಾರೆ

ನಗರದ ಹಳೆ ಬಸ್ ನಿಲ್ದಾಣ ಹೊಸ ಬಸ್ ನಿಲ್ದಾಣ ವೆಲ್ಕಮ್ ಆಟೋ ನಿಲ್ದಾಣ ರೋಟರಿ ಸರ್ಕಲ್ ಗಾಂಧಿ ಸರ್ಕಲ್ ಮುಳಗುಂದ ನಾಕಾ ಬೆಟಗೇರಿ ಬಸ್ ನಿಲ್ದಾಣ ಹಾತಲಗೇರಿ ನಾಕಾ ನರಸಾಪುರ ನೇಕಾರ ಕಾಲೋನಿ.ರಾಜೀವ್ ಗಾಂಧಿನಗರ ಆಟೋ ನಿಲ್ದಾಣ ಸಾಯಿಬಾಬಾ ಆಟೋ ನಿಲ್ದಾಣ ಹಾಗೂ ನಗರದ ಇನ್ನು ಉಳಿದ ವಿವಿಧ ಭಾಗಗಳಿಂದ ಸುಮಾರು ಒಂದು ನೂರು ಆಟೋಗಳನ್ನು ಉಚಿತವಾಗಿ ವಿದ್ಯಾರ್ಥಿಗಳ ಪರೀಕ್ಷೆಗೆ ಬಿಡಲಾಯಿತು

ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಕರೋನ ಸಮಯದಲ್ಲಿ ನಾವು ನಿಮ್ಮ ಜೊತೆ ಇದ್ದೇವೆ ಎಂದು ಧೈರ್ಯ ತುಂಬಿ ಅವರನ್ನು ಪರೀಕ್ಷೆಗೆ ಬಿಡಲಾಯಿತು ಪರೀಕ್ಷಾ ಕೇಂದ್ರದ ನಂತರ ಮರಳಿ ಅವರ ಮನೆಗಳಿಗೆ ಉಚಿತವಾಗಿ ಬಿಟ್ಟರು

ಈ ಸೇವೆಯಲ್ಲಿ ಗದಗ ಜಿಲ್ಲಾ ಆಟೋ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾದ ವಿಜಯ ಕಲ್ಮನಿ ತಾಲೂಕು ಅಧ್ಯಕ್ಷರಾದ ಮಂಜುನಾಥ್ ಅಗಸಿಮನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಬಸವರಾಜ್ ಮನಗುಂಡಿ ಜಿಲ್ಲಾ ಉಪಾಧ್ಯಕ್ಷರಾದ ಬಾಬಾಜಾನ್ ಬಳಗಾನೂರ ತಾಲೂಕು ಉಪಾಧ್ಯಕ್ಷರಾದ ಅಬು ಕರ್ ಅಣ್ಣಿಗೇರಿ

ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಗಂಗಾ ಧರ ಬ್ಯಾಗೋಟಿ ಜಿಲ್ಲಾ ಸಹ ಕಾರ್ಯದರ್ಶಿಯಾದ ಮೋಹನ್ ಸಿಂಗಾಡಿ ಸದಸ್ಯರುಗಳಾದ ಮಾರುತಿ ಕಟ್ಟಿಮನಿ ಶಿವರಾಜ್ ಹಡಗಲಿ ಮಹೇಶ್ ನರ್ಲಿಕರ್ ಹುಲಿಗೇಶ ಗೆಜ್ಜೆಹಳ್ಳಿ ಗಂಗಾಧರ,ರಮೇಶ್ ನೆಗಡಿ ಮಾಹಾದೇವ ಛಲವಾದಿ ಬಸವರಾಜ್ ಹುಲೂರ್ ವಿಜಯ್ ಅಳವಡಿ ಮುತಾದವರು ಈ ಒಂದು ಕಾರ್ಯದಲ್ಲಿ ತೊಡಗಿದ್ದರು.

