ಬೆಂಗಳೂರು –
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ)ಬೆಂಗಳೂರು ಸಂಘದಿಂದ ಭೇಟಿ ಮಾತುಕತೆ ಚರ್ಚೆ.ಹೌದು ವಿಧಾನಸಭಾ ಅಧ್ಯಕ್ಷ ರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ರವರನ್ನು ವಿಧಾನಸೌಧದ ಅವರ ಕಚೇರಿ ಯಲ್ಲಿ ಭೇಟಿ ಮಾಡಿ ಶುಭಾಶಯವನ್ನು ಕೋರಲಾಯಿತು ಆ ಸಂದರ್ಭ ದಲ್ಲಿ ಶಿಕ್ಷಕರ ಈ ಕೆಳಗಿನ ಪ್ರಮುಖ ಸಮಸ್ಯೆಗಳನ್ನು ಚರ್ಚೆ ಮಾಡಲಾಯಿತು

ಪದವೀಧರ ಶಿಕ್ಷಕರು ಹಾಗೂ B.Ed ವಿದ್ಯಾರ್ಹತೆ ಹೊಂದಿರುವಂತಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತಕ್ಷಣ ನ್ಯಾಯ ಒದಗಿಸುವಂತೆ ವಿನಂತಿಸಲಾಯಿತು. ಮುಖ್ಯೋಪಾಧ್ಯಾಯರಿಗೆ 15 20 25 ವರ್ಷಗಳ ಆರ್ಥಿಕ ವೇತನ ಸೌಲಭ್ಯವನ್ನು ನೀಡುವ ಬಗ್ಗೆ ವಿನಂತಿಸಲಾಯಿತು

ಶಿಕ್ಷಕರು ತಮ್ಮ ಸೇವಾ ಅವಧಿಯಲ್ಲಿ ಅವರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ ಯನ್ನು ಹೊಂದಲು ಹಾಗೂ ವರ್ಗಾವಣೆ ಸಮಸ್ಯೆ ಯನ್ನು ಬಗೆಹರಿಸಲು ವಿನಂತಿಸಲಾಯಿತು

ವಿಧಾನಸಭಾ ಅಧಿವೇಶನದಲ್ಲಿ ಒಂದು ದಿನ ಸಂಪೂರ್ಣವಾಗಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಚರ್ಚಿಸುವಂತೆ ಕ್ರಮಕೈಗೊಳ್ಳಲು ವಿನಂತಿಸಲಾ ಯಿತು

ಶಂಭುಲಿಂಗನಗೌಡ ಪಾಟೀಲ ರಾಜ್ಯಾಧ್ಯಕ್ಷರು ಕ.ರಾ.ಪ್ರಾ.ಶಾ.ಶಿ.ಸಂಘ.ಬೆಂಗಳೂರು ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ನುಗ್ಲಿ ಹಾಗು ಚೇತನ್ ಹೆಚ್ ಎಸ್, ರಾಜ್ಯ ಸಹ ಕಾರ್ಯ ದರ್ಶಿಗಳು,ಸುಭಾಸರೆಡ್ಡಿ,ಬಾಬುಮೌರ್ಯ ಗುಲ್ಬರ್ಗ ಕಾರ್ಯದರ್ಶಿಗಳು ಹಾಗೂ ಬೊಸ್ಲೆ ನಾಮ ನಿರ್ದೇ ಶಿತ ಸದಸ್ಯರು ಭೇಟಿ ಮಾಡಿದರು.