ಬೆಂಗಳೂರು –
ಶಿಕ್ಷಕರ ವರ್ಗಾವಣೆ ಕುರಿತು ಈಗಷ್ಟೇ ವೇಳಾಪಟ್ಟಿ ಬಿಡುಗಡೆಯಾಗಿದೆ.ವರ್ಗಾವಣೆ ಇನ್ನೂ ಕೂಡಾ ಆರಂಭವಾಗಿಲ್ಲ ಹೀಗಿರುವಾಗ ಸದ್ದಿಲ್ಲದೆ ಕೆಲವೊಂ ದಿಷ್ಟು ಶಿಕ್ಷಕರು ವರ್ಗಾವಣೆಯಾಗಿದ್ದಾರೆ.ಶಾಲೆ ಗಳಿಂದ ಬೇರೆ ಬೇರೆ ಕಡೆಗಳಿಗೆ ಶಿಕ್ಷಣ ಸಚಿವರ ಸೂಚನೆಯಂತೆ ವರ್ಗಾವಣೆ ಮಾಡಲಾಗಿದೆ. ಐವತ್ತ ಕ್ಕೂ ಹೆಚ್ಚು ಶಿಕ್ಷಕರನ್ನು ಅವರು ಕೇಳಿದೆ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ.ಇದು ಒಂದು ವಿಚಾರ ವಾದರೆ ಇನ್ನೂ ಪ್ರಮುಖವಾಗಿ ವರ್ಗಾವಣೆ ಇನ್ನೂ ಆರಂಭವಾಗದಿದ್ದರೂ ಕೂಡಾ ನಿನ್ನೆ ಬಂದ ಲಿಸ್ಟ್ ನಲ್ಲಿ ಶಿಕ್ಷಕರನ್ನು ವರ್ಗಾವಣೆ ಮಾಡಿದ್ದು ಹೇಗೆ ಎಂಬ ಪ್ರಶ್ನೆ ನಾಡಿನ ಶಿಕ್ಷಕರನ್ನು ಕಾಡತಾ ಇದೆ

ಇನ್ನೂ ಸಂಜೆ ಶಿಕ್ಷಕರ ವರ್ಗಾವಣೆ ಲಿಸ್ಟ್ ಹೊರಗೆ ಬರುತ್ತಿದ್ದಂತೆ ನಾಡಿನ ಶಿಕ್ಷಕರು ಅಸಮಾಧಾನ ಗೊಂಡಿದ್ದಾರೆ.ಇನ್ನೂ ವರ್ಗಾವಣೆ ಆರಂಭವಾಗದಿ ದ್ದರೂ ವರ್ಗಾವಣೆ ಆಗಿದ್ದು ಹೇಗೆ ಇವರಿಗೊಂದು ನ್ಯಾಯನಾ ನಮಗೊಂದು ನ್ಯಾಯನಾ ಎಂಬ ಯಕ್ಷ ಪ್ರಶ್ನೆ ಕಳೆದ ಹತ್ತು ಹದಿನೈದು ವರ್ಷಗಳಿಂದ ವರ್ಗಾ ವಣೆಗೆ ಕಾಯುತ್ತಿರುವ ಶಿಕ್ಷಕರದ್ದಾಗಿದೆ.ಇನ್ನೂ ಈ ಒಂದು ಲಿಸ್ಟ್ ನೋಡಿ ಶಿಕ್ಷಕರ ಸಂಘಟನೆಯ ನಾಯಕರು ಮಾತನಾಡಬೇಕಿತ್ತು ಆದರೆ ಈವರೆಗೆ ಮಾತ್ರ ತುಟಿ ಪಿಟಕ್ ಎನ್ನುತ್ತಿಲ್ಲ.ಇದರಿಂದಾಗಿ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಶಿಕ್ಷಕರು ಅಸಮಾ ಧಾನಗೊಂಡಿದ್ದಾರೆ.ಮುಂದೇನಾಗುತ್ತದೆ ಎಂಬ ದೊಡ್ಡ ಆತಂಕದಲ್ಲಿ ನಾಡಿನ ಶಿಕ್ಷಕರಿದ್ದಾರೆ. ಇನ್ನೂ ಪ್ರಮುಖವಾಗಿ ಶಿಕ್ಷಕರ ಹಿತವನ್ನು ಕಾಪಾಡಬೇಕಾದ ನಾಡಿನ ಶಿಕ್ಷಕರ ಸಂಘಟನೆಯ ನಾಯಕರು ಮಾತನಾಡದೆ ಮೌನವಾಗಿದ್ದಾರೆ ಇನ್ನೂ ಇತ್ತ ಯಾವುದೇ ಶಿಕ್ಷಕರಿಗೆ ಅನ್ಯಾಯ ಆಗಲು ಬಿಡೊ ದಿಲ್ಲ ಎಂದಿದ್ದ ಶಿಕ್ಷಣ ಸಚಿವರು ಕೂಡಾ ಮಾತನಾ ಡುತ್ತಿಲ್ಲ ಇದೊಂದು ದೊಡ್ಡ ದುರಂತದ ವಿಚಾರವಾ ಗಿದೆ.