ಬೆಂಗಳೂರು —
ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಬೆನ್ನಲ್ಲೇ ತನ್ನ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಕೊಡುಗೆ ನೀಡಿದ್ದು ಸರ್ಕಾರಿ ನೌಕರರ ಮೂಲ ವೇತನದ ಶೇ.10.25 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಪ್ರಮಾಣವನ್ನು ಶೇ.11.25 ರಿಂದ ಶೇ.21.50ಗೆ ಪರಿಷ್ಕರಣೆಯಾದಂತಾಗಿದೆ.ಜು.1ರಿಂದಲೇ ಈ ಒಂದು ಪರಿಷ್ಕ್ರತ ತುಟ್ಟಿಭತ್ಯೆ ದರಗಳು ಅನ್ವಯ ವಾಗಲಿವೆ.

ತುಟ್ಟಿಭತ್ಯೆಯನ್ನು ನಗದಾಗಿ ಪಾವತಿ ಮಾಡಲು ಆರ್ಥಿಕ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ. 2020ರ ಜನವರಿ 1 ರಿಂದ ಕಳೆದ ಜೂನ್ 30ರ ಅವಧಿಯ ತುಟ್ಟಿಭತ್ಯೆಗಳನ್ನು ಸ್ಥಗಿತ ಗೊಳಿಸಿ ಆದೇಶ ಹೊರಡಿಸಲಾಗಿತ್ತು.ಕೇಂದ್ರ ಸರ್ಕಾರ 2020ರ ಜನವರಿ 1ರಿಂದ ಕಳೆದ ಜೂ.30 ರ ಅವಧಿಯ ತುಟ್ಟಿಭತ್ಯೆ ದರಗಳನ್ನು ಪರಿಷ್ಕರಿಸಿ ಆದೇಶಿಸಿದೆ.ಹೀಗಾಗಿ ರಾಜ್ಯ ಸರ್ಕಾರವು ತನ್ನ ನೌಕರರಿಗೆ 2020ರ ಜನವರಿ 1ರಿಂದ ಕಳೆದ ಜೂನ್ 30ರ ಅವಧಿಯ ಹೆಚ್ಚುವರಿ ತುಟ್ಟಿಭತ್ಯೆ ಕಂತುಗಳ ನ್ನು ಬಿಡುಗಡೆಗೊಳಿಸಲಿದೆ.ಅಲ್ಲದೆ ಜುಲೈ 1ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರಿ ನೌಕರರಿಗೆ 2018ರ ಪರಿಷ್ಕ್ರತ ವೇತನ ಶ್ರೇಣಿಗಳಲ್ಲಿ ನೀಡಲಾ ಗುವ ತುಟ್ಟಿಭತ್ಯೆ ದರಗಳನ್ನು ಪ್ರಸ್ತುತ ಮೂಲವೇತ ನದ ಶೇ.11.25ರಿಂದ ಶೇ.21.50ಗೆ ಪರಿಷ್ಕರಿಸಿ ಆದೇಶಿಸಲಾಗಿದೆ.

ರಾಜ್ಯ ಸರ್ಕಾರದ ನಿವೃತ್ತ ವೇತನದಾರರು ಕುಟುಂಬ ನಿವೃತ್ತಿ ವೇತನದಾರರಿಗೆ,ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ವೇತನದಾ ರರು, ಕುಟುಂಬ ನಿವೃತ್ತಿ ವೇತನದಾರರಿಗೂ ತುಟ್ಟಿ ಭತ್ಯೆ ಷರಿಷ್ಕರಣೆ ದರಗಳು ಜಾರಿಯಾಗಿವೆ. ಅವರಿ ಗೂ ಜುಲೈ 1ರಿಂದ ತುಟ್ಟಿಭತ್ಯೆ ಪರಿಷ್ಕ್ರತ ದರಗಳು ಜಾರಿಗೆ ಬರಲಿದ್ದು, ಶೇ.11.25 ರಿಂದ ಶೇ.21.50ಗೆ ಏರಿಕೆ ಮಾಡಲಾಗಿದೆ.ಯುಜಿಸಿ,ಎಐಸಿಟಿಇ, ಐಸಿಎ ಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದ ನಿವೃತ್ತ ನೌಕರರಿಗೂ ಈ ಆದೇಶ ಅನ್ವಯಿಸಲಿದೆ. ಜಿಲ್ಲಾ ಪಂಚಾಯಿತಿಗಳ ಪೂರ್ಣಾವಧಿ ನೌಕರರಿಗೆ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್ಚಾ ರ್ಜ್ ನೌಕರರಿಗೆ ಸರ್ಕಾರದಿಂದ ಸಹಾಯಾ ನುಧಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ತುಟ್ಟಿಭತ್ಯೆ ಆದೇಶ ಅನ್ವಯವಾ ಗಲಿದೆ.

ಯುಜಿಸಿ, ಎಐಸಿಟಿಇ, ಐಸಿಎಆರ್, ಎನ್ಜೆ ಪಿಎಸ್ ವೇತನ ಶ್ರೇಣಿಗಳಲ್ಲಿ ಹಾಲಿ ವೇತನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್ಜೆ ಪಿಸಿ ಪಿಂಚಣಿದಾರರಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಆರ್ಥಿಕ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.