ಬೆಂಗಳೂರು –
ಶಿಕ್ಷಕರ ವರ್ಗಾವಣೆ ಕುರಿತಂತೆ ಏನಾಗುತ್ತದೆ ಏನೋ ನಾವು ಸೇವೆಗೆ ಸೇರಿದಾಗಿನಿಂದ ಈವರೆಗೆ ಕುಟುಂಬ ವನ್ನು ಬಿಟ್ಟು ಅಷ್ಟು ವರ್ಷ ಕೆಲಸ ಮಾಡತಾ ಇದ್ದೇವಿ ಒಮ್ಮೆಯೂ ನಮಗೆ ವರ್ಗಾವಣೆ ಭಾಗ್ಯ ಸಿಕ್ಕಿಲ್ಲ ಕೇಳಿ ಕೇಳಿ ಬೇಸತ್ತಿದ್ದೇವೆ ಈ ಕುರಿತಂತೆ ಎಲ್ಲರಿಗೂ ಹೇಳಿ ಹೇಳಿ ನೋವಾಗಿದೆ ನಾವು ಒಂದು ಕಡೆ ನಮ್ಮ ಹೆಂಡತಿ ಮತ್ತೊಂದು ಕಡೆಗೆ ಮಕ್ಕಳು ಇನ್ನೊಂದು ಕಡೆಗೆ ಪೋಷಕರು ಮತ್ತೊಂದು ಕಡೆಗೆ ಇಷ್ಟೊಂದು ನೋವು ನರಕಯಾತನೆ ಅನುಭವಿಸುತ್ತಿದ್ದರೂ ಕೂಡಾ ಯಾರು ಕೇಳುತ್ತಿಲ್ಲ ನೋಡುತ್ತಿಲ್ಲ ಇನ್ನೂ ಶಿಕ್ಷಕರ ಧ್ವನಿಯಾಗಿರುವ ಶಿಕ್ಷಕರ ಸಂಘಟನೆಯ ನಾಯಕರು ಮಾತ್ರ ಮೌನವಾಗಿದ್ದಾರೆ.ಒಣ ಪ್ರತಿಷ್ಠೆ ಒಣ ರಾಜಕೀಯ ಅವರದೊಂದು ಇವರದೊಂದು ಹೀಗೆ ನಾಲ್ಕೈದು ಶಿಕ್ಷಕರ ಸಂಘಟನೆಗಳಾಗಿದ್ದು ಹೀಗಾಗಿ ಅವರ ಗುಂಪು ಇವರ ಗುಂಪು ಎಂದು ಕೊಂಡು ಯಾರು ಕೂಡಾ ಧ್ವನಿ ಎತ್ತುತ್ತಿಲ್ಲ.ದಿನ ಬೆಳಗಾದರೆ ಸಾಕು ಕಣ್ಣೀರಿಡುತ್ತಾ ಕೆಲಸವನ್ನು ಮಾಡುತ್ತಿರುವ ಶಿಕ್ಷಕರ ನೋವುಅನುಭವಿಸುತ್ತಿರುವ ಅವರಿಗೆ ಗೊತ್ತು ಹೀಗಿರುವಾಗ ಸಧ್ಯ ವರ್ಗಾವಣೆ ಯ ವೇಳಾಪಟ್ಟಿ ಏನೋ ಪ್ರಕಟವಾಗಿದೆ ಆದರೆ ಒಂದು ವರ್ಷದ್ದಾಗಿದೆ.
ಅದು ಅವೈಜ್ಞಾನಿಕವಾಗಿರುವ ಈ ಒಂದು ವರ್ಗಾವ ಣೆಯ ನೀತಿಯ ವಿರುದ್ದ ಒಂದು ವರ್ಷದ ಸಮಗ್ರ ಪ್ಲಾನ್ ನಿಂದಾಗಿ ನಾಡಿನ ಶಿಕ್ಷಕರು ಮತ್ತಷ್ಟು ನೋವಿನಲ್ಲಿದ್ದಾರೆ.ಇದರ ನಡುವೆ ಕಳೆದ ಮೂರು ದಿನಗಳ ಹಿಂದೆಯಷ್ಚೇ ಕೆಲವೊಂದಿಷ್ಟು ಶಿಕ್ಷಕರನ್ನು ಶಿಕ್ಷಣ ಸಚಿವರ ಸೂಚನೆಯಂತೆ ವರ್ಗಾವಣೆ ಮಾಡಲಾಗಿದ್ದು ಈ ಒಂದು ಲಿಸ್ಟ್ ಗಳನ್ನು ನೋಡಿದ ನಾಡಿನ ಶಿಕ್ಷಕರು ಮತ್ತಷ್ಟು ಸಿಡಿದೆದ್ದಿದ್ದಾರೆ. ಇಷ್ಟೇಲ್ಲ ನಡೆದ ಮೇಲೂ ಧ್ವನಿ ಎತ್ತಬೇಕಾಗಿದ್ದ ಶಿಕ್ಷಕರ ಸಂಘಟನೆಯ ನಾಯಕರು ಮಾತ್ರ ಈವರೆಗೆ ಮೌನವಾಗಿದ್ದಾರೆ.ಪ್ರತಿಯೊಂದರಲ್ಲೂ ತುಂಬಾ ತುಂಬಾ ಒಣ ರಾಜಕೀಯ ಪ್ರಚಾರವನ್ನು ಗಿಟ್ಟಿಸಿಕೊ ಳ್ಳುತ್ತಾ ಕೆಲವೊಮ್ಮೆ ತಿಳಿದು ತಿಳಿಯಲಾರದಂತೆ ಮೌನವಾಗಿರುವ ನಿಮಗೆ ನಾಡಿನ ಶಿಕ್ಷಕರು ಅನುಭವಿಸುತ್ತಿರುವ ನೋವು ಸಮಸ್ಯೆಗಳು ಅರ್ಥವಾಗುತ್ತಿಲ್ಲವೇ ಯಾಕೇ ಈ ಒಂದು ಮೌನ ಇನ್ನಾದರೂ ನಾಡಿನ ಶಿಕ್ಷಕರು ಸಿಡಿದೆಳುವ ಮುನ್ನ ಅದನ್ನು ಇದನ್ನು ಪೊಸ್ಟ್ ಮಾಡುವ ಮುನ್ನ ಶಿಕ್ಷಕರ ದ್ವನಿಯಾಗಿರುವ ನಿಮಗೆ ಶಿಕ್ಷಕರ ವರ್ಗಾವಣೆಯ ಸಮಸ್ಯೆಯನ್ನು ಸರಿ ಮಾಡಿ ಇಲ್ಲವಾದರೆ ಬರುವ ದಿನಗಳಲ್ಲಿ ಅದೇ ಶಿಕ್ಷಕರು ನಿಮಗೆ ತಕ್ಕದಾದ ಪಾಠವನ್ನು ಕಲಿಸಲಿದ್ದಾರೆ.