ಬೆಂಗಳೂರು –

ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ
ಮುಖ್ಯಮಂತ್ರಿ ಯಾಗಿ ಮೊದಲ ದಿನವೇ ಬಸವ ರಾಜ ಬೊಮ್ಮಾಯಿ ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಹೌದು ರೈತರ ಮಕ್ಕಳಿಗಾಗಿ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡಲು ರೈತರ ಮಕ್ಕಳು ವಿದ್ಯೆಯಿಂದ ವಂಚಿತರಾಗದಂತೆ ಹೊಸ ಶಿಷ್ಯ ವೇತನ ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳ ಲಾಗುವುದು ಎಂದು ಮುಖ್ಯಮಂತ್ರಿ ಸಿಎಂ ಬೊಮ್ಮಾಯಿ ತಿಳಿಸಿದರು.ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು, ಇದಕ್ಕಾಗಿ 1000 ಕೋಟಿ ಹೆಚ್ಚುವರಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

1. ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ 1000 ಕೋಟಿ ಹೆಚ್ಚುವರಿ ವೆಚ್ಚದ ಯೋಜನೆ
2. ಸಂಧ್ಯಾ ಸುರಕ್ಷಾ ಯೋಜನೆ 1000 ರೂ ಇಂದ 1200 ರೂ ಹೆಚ್ಚಳ- 862 ಕೋಟಿ ವೆಚ್ಚ. 35. 98 ಲಕ್ಷ ಫಲಾನುಭವಿಗಳಿಗೆ ಅನುಕೂಲ.

3. ವಿಧವಾ ವೇತನ 600 ರಿಂದ 800ಕ್ಕೆ ಹೆಚ್ಚಳ- 408. ಕೋಟಿ, 17 ಲಕ್ಷ
4. ಅಂಗವಿಕಲರಿಗೆ 600 ರಿಂದ 800 ಕೋಟಿ ರೂ- 3.66 ಫಲಾನುಭವಿಗಳಿಗೆ ಅನುಕೂಲ. 90 ಕೋಟಿ ಹೆಚ್ಚುವರಿ ಹೊರೆ. ಹೀಗೆ ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನ ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಿದರು