ಬೆಂಗಳೂರು –
ಕೊನೆಗೂ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಕುರಿತಂತೆ ನಡೆಯುತ್ತಿದ್ದ ಚರ್ಚೆಗೆ ಉತ್ತರ ಸಿಕ್ಕಿದೆ.ರಾಜ್ಯ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರವನ್ನು ವಹಿಸಿ ಕೊಂಡಿದ್ದು ಪ್ರಮಾಣ ವಚನವನ್ನೂ ಕೂಡಾ ಸ್ವೀಕಾರ ಮಾಡಿದ್ದಾರೆ.ಇನ್ನೂ ಬಸವರಾಜ ಬೊಮ್ಮಾಯಿ ಅವರ ಆಯ್ಕೆಗೆ ಬಿಜೆಪಿ ವರಿಷ್ಠರು ಸಂಘ ಪರಿವಾರದ ನಾಯಕರು ಮತ್ತು ಸಿಎಂ ಯಡಿಯೂರಪ್ಪ ಕೂಡ ಒಪ್ಪಿಗೆ ಸೂಚಿಸಿದ ಹಿನ್ನೆಲೆ ಯಲ್ಲಿ ಶಾಸಕಾಂಗ ಸಭೆಯಲ್ಲಿ ಸರ್ವಸಮ್ಮತ ನಾಯಕನಾಗಿ ಬಸವರಾಜ ಬೊಮ್ಮಾಯಿ ಹೆಸರನ್ನು ಫೈನಲ್ ಮಾಡಿದ ನಂತರ ಇಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇದು ಒಂದು ವಿಚಾರವಾದರೆ ಇನ್ನೂ ಮುಖ್ಯವಾಗಿ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಮಗನೊಬ್ಬ ಮುಖ್ಯಮಂತ್ರಿಯಾಗಿದ್ದು ಎರಡನೇಯ ಬಾರಿಗೆ.ಈ ಹಿಂದೆ ದೇವೇಗೌಡರು ರಾಜ್ಯದ ಮುಖ್ಯ ಮಂತ್ರಿಯಾಗಿದ್ದು ನಂತರ ಅವರ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಕೂಡ ಸಿಎಂ ಆಗಿದ್ದರು. ಅಂತೆಯೇ ಎಸ್.ಆರ್. ಬೊಮ್ಮಾಯಿ ಅವರು ಮುಖ್ಯಮಂತ್ರಿ ಯಾದ ನಂತರ ಅವರ ಪುತ್ರ ಬಸವರಾಜ ಬೊಮ್ಮಾಯಿ ಕೂಡಾ ಸಧ್ಯ ರಾಜ್ಯದ ಮುಖ್ಯಮಂತ್ರಿ ಯಾಗಿದ್ದಾರೆ.ರಾಜ್ಯದಲ್ಲಿ ಮಾಜಿ ಸಿಎಂ ಗಳ ಪುತ್ರರಿಬ್ಬರು ಸಿಎಂ ಸ್ಥಾನ ಅಲಂಕರಿಸದಂತಾಗಿದೆ.
ಇದರೊಂದಿಗೆ ಮುಖ್ಯಮಂತ್ರಿ ಹುದ್ದೆಗೆ ನೇಮಕವಾಗಿ ರುವ ಬಸವರಾಜ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ, ಎಸ್ .ಆರ್. ಬೊಮ್ಮಾಯಿಯವರ ಪುತ್ರರಾಗಿದ್ದು ಇದರ ಜೊತೆಗೆ ತಂದೆ,ಮಗ ಮುಖ್ಯ ಮಂತ್ರಿಯಾದ ರಾಜ್ಯದ ಎರಡನೇ ರಾಜಕೀಯ ಕುಟುಂಬ ಎಂಬ ಕಿರ್ತೀಗೆ ಪಾತ್ರವಾಗಿ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.ಒಂದೇ ಕುಟುಂಬದ ಅದರಲ್ಲೂ ಅಪ್ಪ,ಮಗ ರಾಜ್ಯದ ಮುಖ್ಯಮಂತ್ರಿಯಾಗುತ್ತಿ ರುವುದು ರಾಜ್ಯದಲ್ಲಿ ಎರಡನೇ ಬಾರಿಯಾಗಿದೆ.
ಇದಕ್ಕೂ ಮೊದಲು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.ಒಂದೇ ಕುಟುಂಬದ ತಂದೆ,ಮಗ ಮುಖ್ಯಮಂತ್ರಿಯಾಗಿರು ವುದು ಈ ಎರಡು ಕುಟುಂಬಗಳ ರಾಜಕೀಯ ವಿಶೇಷತೆಯಾಗಿದೆ.
ಬಿ ಎಸ್.ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿರುವ ಮುಖ್ಯಮಂತ್ರಿ ಸ್ಥಾನಕ್ಕೆ ಲಿಂಗಾಯತ ಸಮುದಾಯದ ಹಿರಿಯ ನಾಯಕ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ ಈ ಹಿಂದೆ 1988-89ರಲ್ಲಿ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಕರ್ನಾಟಕ ದ ಹದಿಮೂರನೇ ಮುಖ್ಯಮಂತ್ರಿಯಾಗಿದ್ದರು. ಹೆಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಕರ್ನಾಟಕದಲ್ಲಿ ತಂದೆ-ಮಗ ಸಿಎಂ ಆದ ಉದಾಹರಣೆಯಿತ್ತು.ಇದೀಗ ಬಸವರಾಜ ಬೊಮ್ಮಾಯಿ ಸಿಎಂ ಆಗುವ ಮೂಲಕ ಈ ಸಾಧನೆ ಪುನರಾವರ್ತನೆ ಆಗಿ ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿ ತಂದೆ-ಮಗ ಸಿಎಂ ಆದ ಸಾಧನೆ ಮರುಕಳಿಸಿದಂತಾಗಿದೆ.