ಬೆಂಗಳೂರು –
ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರು IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ .ಹೌದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಈಗ ಇಬ್ಬರು IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಈ ಮೂಲಕ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿ ಚುರುಕು ಮುಟ್ಟಿಸಿದ್ದಾರೆ.

1997ನೇ ಬ್ಯಾಚ್ ನ ಐಎಎಸ್ ಅಧಿಕಾರಿ ( IAS Officer ) ಡಾ. ಸೆಲ್ವಕುಮಾರ್ ಅವರನ್ನು ಸಿಎಂ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆ ಮಾಡಿ ಡಿಪಾರ್ಟ್ಮೆಂಟ್ ಆಫ್ ಸ್ಕಿಲ್ ಡೆವೆಲಪ್ ಮೆಂಟ್ ನ ಸೆಕ್ರೆಟರಿ ಯಾಗಿ ನೇಮಕ ಮಾಡಿ ಆದೇಶಿಸಿದ್ದಾರೆ. ಇನ್ನೂ ಐಎಎಸ್ ಅಧಿಕಾರಿ ಪೊನ್ನುರಾಜ್ ಅವರ ನ್ನು ಡಾ.ಸೆಲ್ವಕುಮಾರ್ ನ್ನು ವರ್ಗಾವಣೆ ಮಾಡಿ ಹುದ್ದೆ ಸಿಎಂ ಸೆಕ್ರೇಟರಿಯಾಗಿ ನೇಮಕ ಮಾಡಲಾ ಗಿದೆ. ಜೊತೆಗೆ ಕೆಪಿಸಿಎಲ್ ಎಂಡಿ ಯಾಗಿಯೂ ಹೆಚ್ಚುವರಿ ಹುದ್ದೆಯನ್ನು ನೀಡಲಾಗಿದೆ.