ಬೆಂಗಳೂರು –
ರಾಜ್ಯದಲ್ಲಿ ಶಾಲೆಗಳ ಆರಂಭ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ ಸಂದೇಶ ನೀಡಿದ್ದಾರೆ. ಶಾಲೆಗಳ ಆರಂಭ ಕುರಿತಂತೆ ಈವರೆಗೆ ಯಾವುದೇ ನಿರ್ಧಾರವನ್ನು ತಗೆದುಕೊಂ ಡಿಲ್ಲ. ರಾಜ್ಯದಲ್ಲಿ ಖಾಸಗಿ ಶಾಲೆಗಳ ಆರಂಭ ಕುರಿತು ಎಲ್ಲ ಆಯಾಮದಲ್ಲಿಯೂ ಚರ್ಚಿಸಿ ಖಾಸಗಿ ಶಾಲಾ ಸಂಘಟನೆಗಳ ಒಕ್ಕೂಟದ ಜೊತೆಯಲ್ಲಿ ಸೌಹಾರ್ದ ಯುತವಾಗಿ ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳಲಾ ಗುತ್ತದೆ ಎಂದರು.ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾ ಡಿದ ಅವರು ಆಗಸ್ಟ್ 2 ರಿಂದ ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಮುಂದಾಗಿದ್ದ ಖಾಸಗಿ ಶಾಲಾ ಸಂಘಟ ನೆಗಳ ಒಕ್ಕೂಟಕ್ಕೆ ಸೂಚನೆ ನೀಡಿದ್ದು ಸದ್ಯಕ್ಕೆ ಶಾಲೆ ಆರಂಭ ಬೇಡ ಎಂದು ತಿಳಿಸಲಾಗಿದೆ ಎಂದರು
ಇನ್ನೂ ಈ ಸಂಬಂಧ ಮುಂದುವರೆದು ಖಾಸಗಿ ಶಾಲೆಗಳ ಅಸೋಸಿಯೇಷನ್ ಜೊತೆ ಮಾತುಕತೆ ನಡೆಸಿದ್ದೇನೆ.ಮತ್ತೆ ಅವರ ಸಂಘಟನೆ ಜೊತೆ ಚರ್ಚೆ ಮಾಡುತ್ತೇನೆ ಎಂದರು.ಶಾಲೆಗಳ ಆರಂಭ ಕುರಿತು ಬೇರೆ ಬೇರೆ ರಾಜ್ಯದಲ್ಲಿರುವ ಸ್ಥಿತಿಗತಿ ಮತ್ತು ನಮ್ಮ ರಾಜ್ಯದಲ್ಲಿ ಪರಿಸ್ಥಿತಿ ಯಾವ ರೀತಿ ಇದೆ. ವ್ಯಾಕ್ಸಿನೇ ಷನ್ ವ್ಯವಸ್ಥೆ ಯಾವ ರೀತಿ ಆಗಿದೆ.ಎಲ್ಲವನ್ನೂ ನೋಡಿಕೊಂಡು ಸೌಹಾರ್ದಯುತವಾಗಿ ಚರ್ಚೆ ಮಾಡುತ್ತೇನೆ ಆ ನಂತರವೇ ಶಾಲೆಗಳ ಆರಂಭ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಇದರಲ್ಲಿ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.