ಪಾವಗಡ –
ಶಾಲೆಗಳಿಗೆ ತಡವಾಗಿ ಬರುವ ಶಿಕ್ಷಕರ ವಿರುದ್ದ ಯಾವುದೇ ಮುಲಾಜಿಲ್ಲದೇ ಕ್ರಮವನ್ನು ಕೈಗೊಳ್ಳಿ ಎಂದು ಶಾಸಕ ವೆಂಕಟರಮಣಪ್ಪ ಹೇಳಿದರು. ಪಾವಗಡದಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ತಾಲ್ಲೂಕಿನಿಂದ ಆಂದ್ರ ಗಡಿ ಭಾಗಗಳಿಗೆ ನಿತ್ಯ ಶಿಕ್ಷಕರು ಓಡಾಡುತ್ತಿ ದ್ದಾರೆ ಹೀಗಿರುವಾಗ ಕೆಲಸ ಮಾಡಲು ಆಗದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದು ಕಿಡಿಕಾರಿದರು.
ಅಲ್ಲದೇ ಶಾಸಕ ವೆಂಕಟರಮಣಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳಿಗೆ ಸಮರ್ಪಕವಾಗಿ ಕೆಲಸ ಮಾಡುವಂತೆ ಅವರು ಸೂಚಿಸಿದರು.ತಾಲ್ಲೂಕಿನ ಶಾಲೆಗಳಿಗೆ ಆಂಧ್ರ, ಜಿಲ್ಲಾ ಕೇಂದ್ರ ಇತರೆ ದೂರ ದೂರುಗಳಿಂದ ನಿತ್ಯ ಶಿಕ್ಷಕರು ಓಡಾಡುತ್ತಿದ್ದಾರೆ. ಇದರಿಂದ ಶಾಲೆಗಳಿಗೆ ಸಕಾಲಕ್ಕೆ ಹೋಗುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಹೀಗಾದರೆ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ. ಕೂಡಲೇ ತಡವಾಗಿ ಶಾಲೆಗೆ ಬರಯವ ಶಿಕ್ಷಕರ ವಿರುದ್ಧ ಕ್ರಮ ತೆಗೆದು ಕೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ಧನಾರಾ ಯಣ ಅವರಿಗೆ ಸೂಚಿಸಿದರು.ಇದರೊಂದಿಗೆ ಶಾಲೆಗಳಿಗೆ ಬರದೇ ಚಕ್ಕರ್ ಹೊಡೆಯುತ್ತಿರುವ ಶಿಕ್ಷಕರಿಗೆ ಅಧಿಕಾರಿಗಳಿಗೆ ಇದರೊಂದಿಗೆ ಬಿಸಿ ಮುಟ್ಟಿಸಿದರು.