ಬೆಂಗಳೂರು –
ನೂತನ ಸಚಿವ ಸುನೀಲ್ ಕುಮಾರ್ ಹೊಸ ದೊಂದು ಸಂಪ್ರದಾಯವನ್ನು ಹುಟ್ಟು ಹಾಕಿದ್ದಾರೆ. ಹೌದು ನನ್ನನ್ನು ಅಭಿನಂದಿಸಲು ಬರುವವರು ಹಾರ- ತುರಾಯಿಗಳನ್ನು ತರುವುದು ಬೇಡ ಕೊಡಲೇಬೇಕು ಎಂದಿದ್ದರೆ ಕೈಯಲ್ಲೊಂದು ಕನ್ನಡ ಪುಸ್ತಕ ತಗೆದುಕೊಂಡು ಬಂದು ಕೊಡಿ ಎಂದಿದ್ದಾರೆ

‘
ನೀವು ಕೊಟ್ಟ ಪುಸ್ತಕವನ್ನು ಕಾರ್ಕಳದ ಗ್ರಂಥಾ ಲಯಕ್ಕೆ ಕೊಡುಗೆಯಾಗಿ ನೀಡುತ್ತೇನೆ. ಇದರಿಂದ ನನ್ನ ಮತ ಕ್ಷೇತ್ರದ ವಿದ್ಯಾರ್ಥಿಗಳಿಗೆ ಮತ್ತು ಜ್ಞಾನ ದಾಹಿಗಳಿಗೆ ಪ್ರಯೋಜನ ಆಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾರ ತುರಾಯಿ ಗಳನ್ನು ನೀಡಬಾರದು.ಅದರ ಬದಲಿಗೆ ಒಂದು ಕೆ.ಜಿ ‘ಕಾರ್ಲ ಕಜೆ’ ಎಂಬ ಸ್ಥಳೀಯ ತಳಿಯ ಕೆಂಪು ಅಕ್ಕಿಯನ್ನು ನೀಡುವಂತೆ ಸುನೀಲ್ ಸಲಹೆ ನೀಡಿದ್ದೂ ಅಲ್ಲದೆ, ಅಕ್ಕಿಯನ್ನು ಕೊಡುಗೆಯಾಗಿ ನೀಡುವ ಪರಿಪಾಟವನ್ನೂ ಆರಂಭಿಸಿದರು.ಈ ಬಾರಿ ಮುಂಗಾರು ಆರಂಭದಲ್ಲಿ ಕಾರ್ಕಳ ಮೂಲದ ಬಿಳಿ ಬೆಂಡೆ ಬೀಜವನ್ನು ಕ್ಷೇತ್ರದ ಜನರಿಗೆ ಉಚಿತ ವಾಗಿ ವಿತರಿಸಿ ಅದನ್ನು ಎಲ್ಲರೂ ಬೆಳೆಯುವಂತೆ ಪ್ರೋತ್ಸಾಹ ನೀಡಿದ್ದು ಈಗ ಮತ್ತೊಂದು ಸಂಪ್ರದಾಯ ಕ್ಕೆ ಕರೆ ನೀಡಿದ್ದಾರೆ