PUC ವಿದ್ಯಾರ್ಥಿ ಆತ್ಮಹತ್ಯೆ- ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ್ಮಹತ್ಯೆ…..

Suddi Sante Desk
PUC ವಿದ್ಯಾರ್ಥಿ ಆತ್ಮಹತ್ಯೆ- ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ್ಮಹತ್ಯೆ…..

ಮಂಗಳೂರು

ಪಿಯುಸಿ ವಿದ್ಯಾರ್ಥಿಯೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.ನಗರದಲ್ಲಿ ಈ ಒಂದು ಘಟನೆ ನಡೆದಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿ ಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಕ್ತಿನಗರ ನಾಲ್ಯಪದವಿನಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಹರ್ಷದ್‌ ಕೌಶಲ್‌ (17) ಎಂದು ಗುರುತಿಸಲಾಗಿದೆ.ಈತ ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು ತಾಯಿ ಮತ್ತು ತಂದೆ ಕೆಲಸಕ್ಕೆ ಹೋಗಿದ್ದರು.ಸಂಜೆ 5.30ರ ಸುಮಾರಿಗೆ ತಾಯಿ ಕೆಲಸದಲ್ಲಿಂದ ಮಗನಿಗೆ ಕರೆ ಮಾಡಿದ್ದರು.

ಕೌಶಲ್‌ ಕರೆ ಸ್ವೀಕರಿಸಲಿಲ್ಲ ತಾಯಿ ಕೂಡಲೇ ಹರ್ಷದ್‌ ನ ಅಜ್ಜಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಮಹಡಿಯ ಕೋಣೆಯಲ್ಲಿ ನೋಡಿದಾಗ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದ ಎನ್ನಲಾಗಿದೆ.ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಸಂತೆ ನ್ಯೂಸ್ ಮಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.