ಸುಳ್ಯ –
ಸರ್ಕಾರಿ ಶಾಲೆಗೆ ಕನ್ನ ಹಾಕಿದ ಖದೀಮರು ಬೀಗ ಮುರಿದು ಶಾಲೆಯಲ್ಲಿದ್ದ ಹಣವನ್ನು ಕಳ್ಳತನ ಮಾಡಿ ಎಸ್ಕೇಫ್ ಆದ ಖದೀಮರು ಹೌದು
ಸರ್ಕಾರಿ ಶಾಲೆಯೊಂದರ ಬೀಗ ಮುರಿದು ಕಳ್ಳತನ ಮಾಡಿದ ಘಟನೆ ಸುಳ್ಯ ದಲ್ಲಿ ನಡೆದಿದೆ ಸುಳ್ಯ ದ ಐವರ್ನಾಡು ಸರಕಾರಿ ಶಾಲೆಯಲ್ಲಿ ಈ ಒಂದು ಕಳ್ಳತನ ನಡೆದಿದೆ.ಶಾಲೆಯ ಬೀಗ ಮುರಿದು ಒಳನುಗ್ಗಿ ನಗದು ಕಳವು ನಡೆಸಿದ್ದಾರೆ.
ಮುಖ್ಯ ಶಿಕ್ಷಕರು ಬೆಳಗ್ಗೆ ಎಂದಿನಂತೆ ಶಾಲೆಗೆ ಬಂದಾಗ ಈ ಒಂದು ಕೃತ್ಯ ನಡೆದಿದ್ದು ಬೆಳಕಿಗೆ ಬಂದಿದೆ.ಶಾಲಾ ಮುಖ್ಯ ಶಿಕ್ಷಕರ ಕೊಠಡಿಯ ಗೋದ್ರೆಜ್‌ನಲ್ಲಿ ಇರಿಸಿದ್ದ ಮಕ್ಕಳ ಸಂಚಯಿತ ನಿಧಿಗೆ ಸಂಗ್ರಹವಾಗಿದ್ದ 9,380 ರೂ.ಹಾಗೂ ಶಾಲೆಯಿಂದ ಸ್ಟೇಷನರಿ ಸೊತ್ತನ್ನು ಮಕ್ಕಳಿಗೆ ಮಾರಾಟ ಮಾಡಿ ಬಂದ ಒಟ್ಟು 21,414 ರೂ ಹಣವನ್ನು ಕಳವಾಗಿದೆ.ಬಾಗಿಲಿನ ಬೀಗವನ್ನು ಮುರಿದು,ಡ್ರಾವರ್‌ನಲ್ಲಿದ್ದ ಕೀ ಸಹಾಯದಿಂದ ಗೋದ್ರೇಜ್ ತೆರೆದು ಕೃತ್ಯ ಎಸಗಿರುವುದು ಪತ್ತೆಯಾಗಿದೆ.
ಒಟ್ಟು 30,794 ರೂ. ಕಳ್ಳರ ಪಾಲಾಗಿದೆ.ಘಟನೆ ನಡೆದ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು. ಬೆಳ್ಳಾರೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಲಾ ಮುಖ್ಯಗುರು ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕುರಿತಂತೆ ತನಿಖೆಯನ್ನು ಪೊಲೀಸರು ಮಾಡ್ತಾ ಇದ್ದಾರೆ.
ಅನಿಲಕುಮಾರ ಸುದ್ದಿ ಸಂತೆ ನ್ಯೂಸ್ ಸುಳ್ಯ……