ಬೆಂಗಳೂರು –
ಆಗಸ್ಟ್ 23 ರಿಂದ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತಿದ್ದು ಒಂದು ವಾರದಲ್ಲಿ ಮಾರ್ಗ ಸೂಚಿಗಳನ್ನು ಪ್ರಕಟ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು. ಬೆಂಗಳೂ ರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂದಿನ ಆಗಸ್ಟ್ 23 ರಿಂದ 9 ರಿಂದ 12 ನೇ ತರಗ ತಿವರೆಗೆ ಭೌತಿಕ ತರಗತಿಗಳನ್ನು ಪ್ರಾರಂಭಿಸಲಾಗು ವುದು ಎಂದರು.ಕೋವಿಡ್ ಮುಂಜಾಗ್ರತಾ ಕ್ರಮಗ ಳನ್ನು ಅನುಸರಿಸಿ 9 ರಿಂದ 12ನೇ ತರಗತಿವರೆಗೆ ಭೌತಿಕ ತರಗತಿಗಳನ್ನು ಪ್ರಾರಂಭಿಸುವುದಕ್ಕೆ ಕೋವಿಡ್ ತಜ್ಞರ ಸಮಿತಿ ಸಮ್ಮತಿಸಿದೆ.ಅವರ ಸಲಹೆ ಯಂತೆ ಪ್ರಾರಂಭಿಸಲು ನಿರ್ಧರಿಸಲಾಗಿದ್ದು ಕೆಲವೇ ದಿನಗಳಲ್ಲಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗು ವುದು ಒಂದನೇ ತರಗತಿಯಿಂದಲೇ ಶಾಲೆಗಳನ್ನು ಪ್ರಾರಂಭಿಸುವಂತೆ ಒತ್ತಡ ಬರುತ್ತಿವೆ.ಆದರೆ ಒಂದನೇ ತರಗತಿಯ ವಿದ್ಯಾರ್ಥಿಗಳ ಬಹುತೇಕ ಪೋಷಕರು 45 ವರ್ಷಕ್ಕಿಂತ ಒಳಗಿರುತ್ತಾರೆ.ಈ ವರ್ಷದ ಹೆಚ್ಚಿನ ಪೋಷಕರಿಗೆ ಕೋವಿಡ್ ಲಸಿಕೆ ಹಾಗಿರುವುದಿಲ್ಲ.ಹಾಗೂ ಈ ವರ್ಷದ ಮಕ್ಕಳು ಕೋವಿಡ್ ನಿಯಮಗಳನ್ನು ಪಾಲಿಸುವುದು ಕಷ್ಟ. ಇವೆಲ್ಲವುಗಳನ್ನು ಪರಿಗಣಿಸಿ ಸದ್ಯಕ್ಕೆ ಒಂದರಿಂದ 8ನೆ ತರಗತಿವರೆಗೆ ಶಾಲೆ ತೆರೆಯುವುದನ್ನು ಮುಂದೂಡಲಾಗಿದೆ ಎಂದರು.

ಇನ್ನೂ ಕೋವಿಡ್ ಆತಂಕದ ನಡುವೆ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಬಹುತೇಕ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಹೀಗಾಗಿ ಆಗಸ್ಟ್ 23 ರಿಂದ ಆರಂಭವಾಗುವ ಶಾಲೆಗಳಿಗೆ ಎಲ್ಲಾ ವಿದ್ಯಾರ್ಥಿಗಳು ಹಾಜರಾಗುತ್ತಾರೆಂಬ ಭರವಸೆ ಇದೆ. ಒಂದು ವೇಳೆ ಹಾಜರಾಗದ ವಿದ್ಯಾರ್ಥಿಗಳು ಆನ್ಲೈವನ್ ತರಗತಿಗೆ ಹಾಜರಾಗಬಹುದೆಂದು ಅವರು ಹೇಳಿದ್ದಾರೆ
ಶಿಕ್ಷಕರಿಗೆ ಕೋವಿಡ್ ಲಸಿಕೆಯನ್ನು ಶಾಲೆ ಪ್ರಾರಂ ಭಕ್ಕೆ ದಿನಾಂಕ ನಿಗದಿ ಪಡಿಸಿರುವುದರಿಂದ ಶಿಕ್ಷಕರಿಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈಗಾಗಲೇ ಶೇ.50ಕ್ಕೂ ಹೆಚ್ಚು ಶಿಕ್ಷಕರಿಗೆ ಮೊದಲ ಡೋಸ್ ಲಸಿಕೆ ಪೂರ್ಣಗೊಂ ಡಿದೆ. ನಿಗದಿ ವೇಳೆಗೆ ಎಲ್ಲ ಶಿಕ್ಷಕರಿಗೆ ಕೋವಿಡ್ ಲಸಿಕೆ ಹಾಕಿಸಲಾಗುವುದು ಎಂದರು.