ಸರ್ಕಾರಿ ನೌಕರರಿಗೆ ಸರ್ಕಾರಿ ಕೆಲಸಕ್ಕೆ iPhone ಬಳಕೆ ನಿಷೇಧ – ಮಹತ್ವದ ನಿರ್ಧಾರ ಕೈಗೊಂಡ ರಷ್ಯಾ ದೇಶ…..

Suddi Sante Desk
ಸರ್ಕಾರಿ ನೌಕರರಿಗೆ ಸರ್ಕಾರಿ ಕೆಲಸಕ್ಕೆ iPhone ಬಳಕೆ ನಿಷೇಧ – ಮಹತ್ವದ ನಿರ್ಧಾರ ಕೈಗೊಂಡ ರಷ್ಯಾ ದೇಶ…..

ರಷ್ಯಾ

ಸರ್ಕಾರಿ ನೌಕರರಿಗೆ ಸರ್ಕಾರಿ ಕೆಲಸಕ್ಕೆ iPhone ಬಳಕೆ ನಿಷೇಧ – ಮಹತ್ವದ ನಿರ್ಧಾರ ಕೈಗೊಂಡ ರಷ್ಯಾ ದೇಶ ಹೌದು ರಷ್ಯಾದ ಡಿಜಿಟಲ್ ಅಭಿವೃದ್ಧಿ ಸಚಿವಾಲಯವು ಸರ್ಕಾರಿ ಉದ್ಯೋಗಿ ಗಳು ಕೆಲಸದ ಉದ್ದೇಶಗಳಿಗೆ ಆಪಲ್ ಐಫೋನ್ ಅಥವಾ ಐಪ್ಯಾಡ್ ಬಳಸುವುದನ್ನು ನಿಷೇಧಿಸಿದೆ ಎಂದು ಸಚಿವ ಮಕ್ಸುತ್ ಶಾದೇವ್ ಹೇಳಿದ್ದಾರೆ.

ಸರ್ಕಾರಿ ಕೆಲಸದ ಅಪ್ಲಿಕೇಷನ್‌ಗಳನ್ನ ಬಳಸಲು, ಇಮೇಲ್ ವಿನಿಮಯ ಮಾಡಿಕೊಳ್ಳುವುದಕ್ಕಾಗಿ ಐಫೋನ್ ಮತ್ತು ಐಪ್ಯಾಡ್ ಬಳಸದಂತೆ ಎಚ್ಚರಿಸಿದೆ ಅಮೆರಿಕದ ಬೇಹುಗಾರಿಕೆ ಕಾರ್ಯಾ  ಚರಣೆಯ ಪರಿಣಾಮವಾಗಿ ಆಪಲ್ ರಾಜಿ ಮಾಡಿಕೊಂಡಿದೆ ಎಂದು ರಷ್ಯಾದ ಭದ್ರತಾ ಸಂಸ್ಥೆ FSB ಹೇಳಿದೆ

ಎರಡು ತಿಂಗಳ ನಂತರ ಈ ಬೆಳವಣಿಗೆ ಕಂಡು ಬಂದಿದೆ.ಆದ್ರೆ ರಷ್ಯಾ ಭದ್ರತಾ ಸಂಸ್ಥೆಯ ಆರೋಪವನ್ನ ಅಮೆರಿಕ ತಳ್ಳಿಹಾಕಿದೆ.
ಬೇಕಿದ್ದರೆ ವೈಯಕ್ತಿಕ ಅಗತ್ಯಗಳಿಗಾಗಿ ಐಫೋನ್ ಬಳಸಬಹುದು. ಆದ್ರೆ ಯಾವುದೇ ಕಾರಣಕ್ಕೂ ಸರ್ಕಾರಿ ಕೆಲಸಗಳಿಗೆ ಐಫೋನ್ ಬಳಸುವಂತಿಲ್ಲ ಎಂದು ಆದೇಶಿಸಿರುವುದಾಗಿ ಶಾವೇದ್ ತಿಳಿಸಿ ದ್ದಾರೆ.

ಈ ಹಿಂದೆ ಅಮೆರಿಕ ಬೇಹುಗಾರಿಕೆ ನಡೆಸುತ್ತಿದೆ, ಐಫೋನ್ ಮೂಲಕ ಕದ್ದಾಲಿಕೆ ಮಾಡುತ್ತಿದೆ ಎಂಬ ಸಂಶಯದ ಮೇಲೆ ಸರ್ಕಾರಿ ಉದ್ಯೋ ಗಿಗಳು ಐಫೋನ್ ಬಳಸದಂತೆ ಸಂಪೂರ್ಣ ನಿಷೇಧಿಸಿತ್ತು. ಇದೀಗ ವೈಯಕ್ತಿಕ ಬಳಕೆಗೆ ಅನುಮತಿ ನೀಡಿದೆ.

ಸುದ್ದಿ ಸಂತೆ ನ್ಯೂಸ್ ರಷ್ಯಾ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.