ಬೆಂಗಳೂರು –
ಶಾಲೆಗಳ ಆರಂಭ ಕುರಿತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತುಂಬಾ ವಿಷಾದ ವ್ಯಕ್ತಪಡಿಸಿದ್ದಾರೆ ನನ್ನ ಅಧ್ಯಯನದ ಪ್ರಕಾರ ಮಕ್ಕಳ ಪ್ರಗತಿ ಬಹಳ ಕುಂಠಿತವಾಗುತ್ತಿದೆ.ಹೀಗಾಗಿ ಶಿಕ್ಷಣ ಸಚಿವರನ್ನು ಕರೆದು ನಾನೂ ಸಲಹೆ ಕೊಟ್ಟಿ ದ್ದೇನೆ.ಶಿಕ್ಷಕರೂ ಸಹಿತ ಪ್ರತಿ ಮಗುವಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.


ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಆರಂಭ ಮಾಡುವುದೇ ಸೂಕ್ತ ಎಂದು ವಿಧಾನಸೌಧದಲ್ಲಿ ವಿಧಾನಪರಿಷತ್ ಸಭಾಪತಿ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಮಕ್ಕಳ ಭವಿಷ್ಯ ಕರಾಳವಾಗುತ್ತಿದೆ ಮಕ್ಕಳಿಗೆ ಶಾಲೆ ಶಿಕ್ಷಣದ ಸಂಬಂಧವೇ ಕಡಿತಗೊಳ್ಳುತ್ತದೆ.ಡಿಸಿ, ಡಿಡಿಪಿಐ,ಸಿಇಓ ಎಲ್ಲರನ್ನೂ ಕರೆಸಿ ಸಮರ್ಪಕ ಕ್ರಮ ಕೈಗೊಂಡು ಶಾಲೆಗಳಲ್ಲಿ ಮಕ್ಕಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು.ಮೂರನೇ ಅಲೆ ಬಂದಾಗ ಅಂತಹುದೇ ಪ್ರಸಂಗ ಬಂದಾಗ ಶಾಲೆಗಳ ನ್ನು ಸ್ಥಗಿತಗೊಳಿಸಲಿಇಲ್ಲದೇ ಹೋದರೆ ಶಾಲೆಗಳನ್ನು ಪ್ರಾರಂಭ ಮಾಡುವುದೇ ಸೂಕ್ತ.

ನನ್ನ ಅಧ್ಯಯನದ ಪ್ರಕಾರ ಮಕ್ಕಳ ಪ್ರಗತಿ ಬಹಳ ಕುಂಠಿತವಾಗುತ್ತಿದೆ. ಹೀಗಾಗಿ ಶಿಕ್ಷಣ ಸಚಿವರನ್ನು ಕರೆದು ನಾನೂ ಸಲಹೆ ಕೊಟ್ಟಿದ್ದೇನೆ. ಶಿಕ್ಷಕರೂ ಸಹಿತ ಪ್ರತಿ ಮಗುವಿನ ಜವಾಬ್ದಾರಿ ತೆಗೆದುಕೊಳ್ಳ ಬೇಕು.ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ಪ್ರಾರಂಭ ಮಾಡಬೇಕು.ಗೊಂದಲ ಅಥವಾ ತೊಂದರೆ ಬಂದಾಗ ಅದನ್ನು ಸರಿಪಡಿಸಬೇಕು ಎಂದರು
