ಶಿವಮೊಗ್ಗ –
ರಸ್ತೆ ಅಫಘಾತದಲ್ಲಿ ಶಿಕ್ಷಕನೊಬ್ಬ ಸಾವಿಗೀಡಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.ಶಿವಮೊಗ್ಗದ ವಿನೋಬನಗರದಲ್ಲಿ ಈ ಒಂದು ಘಟನೆ ನಡೆದಿದ್ದು ಶಾಲೆಗೆ ಹೊರಟಿದ್ದು ಶಿಕ್ಷಕ ರಂಗನಾಥ್ ಮೃತರಾದವ ರಾಗಿದ್ದಾರೆ.ಎಂದಿನಂತೆ ಮನೆಯಿಂದ ಶಾಲೆಗೆ ಇವರು ಹೊರಟಿದ್ದರು.

ಪಟ್ಟಣದ ಶಿವಾಲಯ ಮುಂದಿನ ಎಸ್ ಬಿ ಎಂ ಎದುರು ರಸ್ತೆ ತಿರುವಿನಲ್ಲಿ ಬೈಕ್ ನ್ನು ತಗೆದುಕೊಳ್ಳು ವಾಗ ಮರಳು ತುಂಬಿದ ಲಾರಿಯೊಂದು ಪಕ್ಕದಲ್ಲಿ ಹೊರಟಿದ್ದ ಬೈಕ್ ಮೇಲೆ ಹತ್ತಿದೆ.ಹಿಂಬದಿ ಗಾಲಿಗೆ ಸಿಲುಕಿಕೊಂಡಿದ್ದು ಸ್ಥಳದಲ್ಲಿಯೇ ಬೈಕ್ ಸವಾರನ ತಲೆ ಹೊಡೆದಿದ್ದು ಹೀಗಾಗಿ ರಸ್ತೆ ಮಧ್ಯದಲ್ಲಿಯೇ ಮೃತರಾಗಿದ್ದಾರೆ.

ಶಿವಮೊಗ್ಗದ ಕೃಷಿ ನಗರ ನಿವಾಸಿ ಹಾಗೂ ಶಿವಮೊಗ್ಗ ಗೋಪಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ಶಾಲೆಯ ಶಿಕ್ಷಕರಾಗಿರುವ ರಂಗನಾಥ್ (47) ಎಂಬುವರೇ ಧಾರುಣವಾಗಿ ಸಾವಿಗೀಡಾದವರಾಗಿ ದ್ದಾರೆ.ಸಿಟಿ ಕಾಮಗಾರಿ ಹೆಸರಿನಲ್ಲಿ ರಸ್ತೆಯ ಕಾಮ ಗಾರಿ ನಡೆಯುತ್ತಿತ್ತು ಈ ಒಂದು ಅವಘಡದಿಂದಾಗಿ ಈ ಒಂದು ಅಪಘಾತ ನಡೆದಿದೆ.

ಬೈಕ್ ನಲ್ಲಿ ಹೊರಟಿದ್ದ ಇವರು ಹೆಲ್ಮೆಟ್ ಹಾಕಿದ್ದರೂ ಕೂಡಾ ತಲೆಯ ಮೇಲೆ ಲಾರಿ ಹಾಯ್ದು ಭಾರವಾದ ಲಾರಿಯ ಚಕ್ರ ಹತ್ತಿದ್ದರಿಂದ ಇಡೀ ತಲೆಯ ಭಾಗ ಛಿದ್ರವಾಗಿದೆ.ಇನ್ನೂ ಸುದ್ದಿ ತಿಳಿದ ಸಂಚಾರಿ ಪೊಲೀ ಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ದೂರನ್ನು ದಾಖಲು ಮಾಡಿಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.