ಚಿಕ್ಕಬಳ್ಳಾಪುರ –
ಕ್ಷುಲ್ಲಕ ಕಾರಣಕ್ಕಾಗಿ ಶಿಕ್ಷಕ ಹಾಗೂ ಆತನ ಸಹೋದರನಿಗೆ ಹಿಗ್ಗಾಮುಗ್ಗಾ ಥಳಿಸಿದ ಚಿಕ್ಕ ಬಳ್ಳಾಪುರ ದಲ್ಲಿನ ಪ್ರಕರಣ ಕುರಿತು ನಾಡಿನ ಶಿಕ್ಷಕರು ಅಸಮಾಧಾನ ಗೊಂಡಿದ್ದಾರೆ.ಶಿಕ್ಷಕರ ಮೇಲೆ ಹೀಗೆ ಮಾಡಿದ ಪುಂಡರ ಮೇಲೆ ಕೂಡಲೇ ಸೂಕ್ತವಾದ ಕ್ರಮವನ್ನು ಕೈಗೊಳ್ಳಲು ಒತ್ತಾಯ ವನ್ನು ಮಾಡಿದ್ದಾರೆ.ಘಟನೆಯನ್ನು ಖಂಡಿಸಿರುವ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ತಕ್ಕದಾದ ಶಿಕ್ಷೆಯನ್ನು ಕೊಡಿಸಿ ಕೂಡಲೇ ಹೀಗೆ ಮಾಡಿದವರ ನ್ನು ಬಂಧಿಸುವಂತೆ ಆಗ್ರಹ ಮಾಡಿದ್ದಾರೆ.
ಈ ಒಂದು ಘಟನೆ ಚಿಕ್ಕಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಮಾರಗಾನಕುಂಟೆ ಗ್ರಾಮ ದಲ್ಲಿ ನಿನ್ನೆ ನಡೆದಿತ್ತು.ಬಸ್ ನಲ್ಲಿ ಕಾಲು ತಾಕಿದಕ್ಕೆ ಕ್ಷಮೆ ಕೇಳಿದರು ಕೂಡಾ ಶಿಕ್ಷಕ ರಾಜಕುಮಾರ್ ಹಾಗೂ ಆತನ ಅಣ್ಣ ಶ್ರೀನಿವಾಸ್ ಮೇಲೆ ಮನಸೋ ಯಿಚ್ಚೆ ಪುಂಡರು ಥಳಿಸಿದ್ದರು.ಬಸ್ಸಿನಲ್ಲಿ ಕಾಲು ತಾಕಿದ್ದಕ್ಕೆ ಶುರುವಾದ ಈ ಒಂದು ಗಲಾಟೆ ದೊಡ್ಡ ಪ್ರಮಾಣದಲ್ಲಿ ನಡೆದಿದೆ.
ಆಕಸ್ಮಿಕವಾಗಿ ವಿದ್ಯಾರ್ಥಿಗೆ ಕಾಲು ತಾಕಿದ್ದಕ್ಕೆ ಕ್ಷಮೆ ಯನ್ನು ಶಿಕ್ಷಕ ಕೇಳಿದ್ದಾನೆ ಆದರೂ ಕೇಳದ ಪುಂಡರು ಹೊರಟಿದ್ದ ಬಸ್ ನ್ನು ನಿಲ್ಲಿಸಿ ಶಿಕ್ಷಕ ರಾಜಕುಮಾರ್ ಮತ್ತು ಆತನ ಸಹೋದರನನ್ನು ಮನಸೋ ಇಚ್ಚೆ ಥಳಿಸಿದ್ದಾರೆ.ಈ ಒಂದು ಘಟನೆ ಕುರಿತು ನಿಮ್ಮ ಸುದ್ದಿ ಸಂತೆ ನ್ಯೂಸ್ ವರದಿ ಮಾಡಿದ ನಂತರ ನಾಡಿನ ಮೂಲೆ ಮೂಲೆ ಗಳಿಂದ ಶಿಕ್ಷಕರು ಘಟನೆ ಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ನಾಡಿನ ಮೂಲೆ ಮೂಲೆಗಳಿಂದ ಪ್ರತಿಯೊಬ್ಬ ಶಿಕ್ಷಕರು ಘಟನೆ ಯನ್ನು ಖಂಡಿಸಿದ್ದಾರೆ.ಹಲ್ಲೆ ಯನ್ನು ಉಗ್ರವಾಗಿ ಖಂಡಿಸಿ ಕೂಡಲೇ ಪುಂಡರನ್ನು ಬಂಧನ ಮಾಡುವಂತೆ ಆಗ್ರಹವನ್ನು ಮಾಡಿದ್ದಾರೆ.ಇದು ಖಂಡಿತವಾಗಿ ಸ್ವಾಗತಾರ್ಹ ವಿಚಾರ ಆದರೆ ನಾಡಿನ ಶಿಕ್ಷಕರ ಸಂಘಟನೆಗಳು ಮಾತ್ರ ಮೌನವಾಗಿವೆ.
ಸಣ್ಣ ಪುಟ್ಟ ವಿಚಾರದಲ್ಲಿ ನಮ್ಮಿಂದ ಆಗಿದ್ದು ನಾವೇ ಮಾಡಿದ್ದು ಎನ್ನುತ್ತಾ ಪೊಸ್ಟ್ ಮಾಡುವ ರಾಜ್ಯ ಮಟ್ಟದ ಸಂಘಟನೆಯ ನಾಯಕರೇ ಶಿಕ್ಷಕ ರೊಬ್ಬರನ್ನು ಮನಸೋ ಇಚ್ಚೆ ಹಲ್ಲೆ ಮಾಡಿದ್ದು ಕಾಣಿಸುತ್ತಿಲ್ಲವೇ ಯಾಕೇ ಮೌನ ಏನೇಲ್ಲಾ ವಿಚಾರ ಕುರಿತು ಬೆನ್ನು ತಟ್ಟಿಕೊಳ್ಳುವ ನಾಯಕತ್ವಕ್ಕೆ ಆದರೂ ಧ್ವನಿ ಎತ್ತಿ ನೊಂದುಕೊಂಡಿಕೊಂಡಿರುವ ರಾಜ್ ಕುಮಾರ್ ಸರ್ ಗೆ ಧ್ವನಿಯಾಗಿ ಅಂದಾಗ ಮಾತ್ರ ನಿಮಗೆ ಸಂಘಟನೆಯ ರಾಜ್ಯದ ನಾಯಕರು ಅಂತಾ ಎನಿಸಿಕೊಂಡಿದ್ದಕ್ಕೆ ಒಂದು ಅರ್ಥ ಬರುತ್ತದೆ