ಬೆಂಗಳೂರು –
ನಾಳೆ ರಾಜ್ಯದಲ್ಲಿ ಮೂರು ಮಹಾನಗರ ಪಾಲಿಕೆ ಗಳಿಗೆ ಚುನಾವಣೆ ನಡೆಯಲಿದೆ.ಹೀಗಾಗಿ ಚುನಾವಣೆ ನಡೆಯುತ್ತಿರುವ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಮೂರು ನಗರಗಳಲ್ಲಿನ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಹೌದು ಮತದಾನದ ಹಿನ್ನಲೆಯಲ್ಲಿ ಮತ ಚಲಾವಣೆ ಮಾಡಲು ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ರಾಜ್ಯ ಚುನಾವಣಾ ಆಯೋಗ ರಜೆಯನ್ನು ಘೋಷಣೆ ಮಾಡಿದೆ.
ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆಯನ್ನು ನೀಡಲಾಗಿದೆ. ಪ್ರಮುಖವಾಗಿ ರಜೆ ಯನ್ನು ನೀಡಲಾಗಿದ್ದು ಇದರೊಂದಿಗೆ ಇನ್ನೂ ಇತ್ತ ಖಾಸಗಿ ನೌಕರರಿಗೂ ಕೂಡಾ ಮತದಾನ ಮಾಡಲು ವೇತನ ಸಹಿತ ರಜೆಯನ್ನು ನೀಡಿ ಆದೇಶವನ್ನು ಮಾಡಲಾಗಿದೆ. ಚುನಾವಣೆ ಆಯೋಗ ನಮ್ಮ ಹಕ್ಕನ್ನು ಚಲಾವಣೆ ಮಾಡಲು ರಜೆಯನ್ನು ಘೋಷಣೆ ಮಾಡಿದೆ ಆದರೆ ರಜೆಯನ್ನು ನೀಡಿದ್ದಾರೆ ಎಂದುಕೊಂಡು ಮನೆಯಲ್ಲಿ ಸುಮ್ಮನೆ ಕುಳಿತು ಕೊಳ್ಳದೇ ದಯಮಾಡಿ ಯೋಗ್ಯ ಒಳ್ಳೇಯ ನಿಮಗೆ ಇಷ್ಟವಾದ ಅಭ್ಯರ್ಥಿಗೆ ಮತ ಚಲಾವಣೆ ಮಾಡಿ ಮತ ಚಲಾವಣೆ ನಿಮ್ಮ ಹಕ್ಕು ಯೋಗ್ಯರನ್ನು ಆಯ್ಕೆ ಮಾಡಿ ನಿಮ್ಮ ಸೇವೆಗಾಗಿ ಅವರನ್ನುಕಳಿಸಿಕೊಡಿ ಅಂದಾಗ ನಿಮ್ಮ ಮತಕ್ಕೆ ಮಹತ್ವ ಬೆಲೆ ಬರುತ್ತದೆ ಅಂದಾಗ ಅದಕ್ಕೆ ಮೌಲ್ಯ ಸಿಕ್ಕಂತಾಗುತ್ತದೆ ನೀವು ಕೂಡಾ ನಿಮ್ಮ ಜವಾಬ್ದಾರಿಯನ್ನು ನಿಭಾಯಿಸಿದಂತಾಗುತ್ತದೆ.