ಬೆಂಗಳೂರು –
ಸಮಾಜಕ್ಕೆ ಅಕ್ಷರ ಜ್ಞಾನವನ್ನು ನೀಡುತ್ತಿರುವ ಬಿತ್ತುತ್ತಿ ರುವ ಶಿಕ್ಷಕರ ನೋವು ಕಷ್ಟವನ್ನು ಯಾರು ಕೇಳು ತ್ತಿಲ್ಲ ನೋಡುತ್ತಿಲ್ಲ.ನೌಕರಿ ಸೇರಿಕೊಂಡಾಗಿನಿಂದ ಈವರೆಗೆ ದಿಕ್ಕಿಗೊಬ್ಬರು ಅಂದರೆ ಒಂದು ಕಡೆ ಹೆಂಡತಿ ಮತ್ತೊಂದು ಕಡೆಗೆ ಪತಿ ಇನ್ನೊಂದು ಕಡೆಗೆ ಊರು ಮತ್ತೊಂದು ಕಡಗೆ ಪೋಷಕರು ಇನ್ನೊಂದು ಕಡೆಗೆ ಮಕ್ಕಳು ಹೀಗೆ ದಿಕ್ಕಾಪಾಲಾಗಿ ಶಿಕ್ಷಕರು ಕರ್ತವ್ಯವನ್ನು ಮಾಡುತ್ತಿದ್ದಾರೆ.
ನಮಗೂ ಒಮ್ಮೆಯಾದರೂ ಕೇಳಿದಲ್ಲಿ ವರ್ಗಾವಣೆ ಸಿಗುತ್ತದೆ ಎಂದುಕೊಂಡು ನಾಡಿನ ಶಿಕ್ಷಕ ಬಂಧು ಗಳು ಕಾಯುತ್ತಿದ್ದಾರೆ ಆದರೆ ಅದ್ಯಾಕೋ ಏನೋ ಕಾಲ ಸಮಯ ಜಾತಕ ಕೂಡಿ ಬರುತ್ತಿಲ್ಲ. ಸಮಸ್ಯೆ ಗಳಿಗೂ ಶಿಕ್ಷಕರಿಗೂ ಅವಿನಾಭಾವ ಸಂಭಂಧ ವಿದೆ ಯಂತೆ ಕಾಣುತ್ತಿದೆ.
ಸದಾ ಒಂದಿಲ್ಲೊಂದು ಕಂಠಕ ಸಮಸ್ಯೆಗಳು ಎದು ರಾಗುತ್ತಲೆ ಇವೆ.ಹೌದು ಇದಕ್ಕೆ ತಾಜಾ ಉದಾಹರಣೆ ಸಧ್ಯ ತಡೆಯಾಜ್ಞೆ ಬಂದಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ.ಎಲ್ಲವೂ ಅಂದುಕೊಡಂತೆ ಆಗಿದ್ದರೆ ಇನ್ನೇನು ನಾಲ್ಕೈದು ದಿನಗಳಲ್ಲಿ ಶಿಕ್ಷಕರ ವರ್ಗಾ ವಣೆಗೆ ನಡೆಯುತ್ತಿತ್ತು ಆರಂಭವಾಗುವ ಮುನ್ನವೇ ಮತ್ತೆ ಈ ಒಂದು ವರ್ಗಾವಣೆಗೆ ವಿಘ್ನ ಎದುರಾಗಿದೆ.
ಹೌದು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ(KSAT) ಈ ಒಂದು ವರ್ಗಾವಣೆಗೆ ತಡೆ ಯಾಜ್ಞೆಯನ್ನು ನೀಡಿದೆ.ಇದರಿಂದಾಗಿ ಈ ಒಂದು ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತಗೊಂಡಿದೆ. ಇನ್ನೂ ವರ್ಗಾ ವಣೆ ನಿರೀಕ್ಷೆಯಲ್ಲಿದ್ದ 75 ಸಾವಿರಕ್ಕೂ ಅಧಿಕ ಶಿಕ್ಷಕ ರಿಗೆ ನಿರಾಸೆಯಾಗಿದೆ.ಈ ವರ್ಷವಾದರೂ ವರ್ಗಾ ವಣೆ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿರುವುದು ದೊಡ್ಡದಾದ ನಿರಾಸೆಯನ್ನು ತಂದಿದೆ.
ಕಳೆದ ಮೂರು ತಿಂಗಳಿನಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದರೆ ತಡೆಯಾಜ್ಞೆ ಕಾರಣ ಮತ್ತೆ ಸ್ಥಗಿತಗೊಂಡಿದೆ.ಕಳೆದ ಎರಡು ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಈ ವರ್ಷ ವರ್ಗಾವಣೆಗೆ ಅವಕಾಶ ನೀಡಲಾಗಿತ್ತು.ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಿ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ.ವರ್ಗಾವಣೆ ಕೋರಿದ ಶಿಕ್ಷಕರಿಗೆ ಕೌನ್ಸಲ್ಲಿಂಗ್ ನಡೆಯಬೇಕಿದೆ.2016 -17 ನೇ ಸಾಲಿ ನಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಗೊಂ ಡಿದ್ದ ಶಿಕ್ಷಕರು KSAT ಮೆಟ್ಟಿಲೇರಿದ್ದು ಅವರ ಮನವಿಯನ್ನು ಪುರಸ್ಕರಿಸಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲಾಗಿದೆ.
ತಡೆಯಾಜ್ಞೆ ತೆರವಾಗದೆ ವರ್ಗಾವಣೆ ಪ್ರಕ್ರಿಯೆ ನಡೆಸುವಂತಿಲ್ಲ.ಇದರಿಂದಾಗಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಮತ್ತೆ ಹಿನ್ನಡೆಯಾಗಿದ್ದು ಮುಂದೇನು ಎಂಬ ದೊಡ್ಡ ಆತಂಕದಲ್ಲಿ ನಾಡಿನ ಶಿಕ್ಷಕರಿದ್ದು ದಾರಿ ಕಾಣದಂತಾಗಿದ್ದಾರೆ.ಇನ್ನೂ ಈ ಕುರಿತಂತೆ ತುಟಿ ಬಿಚ್ಚದೆ ಮಾತನಾಡದ ಶಿಕ್ಷಕರ ಸಂಘಟನೆಯ ನಾಯಕರ ಅದರಲ್ಲೂ ರಾಜ್ಯಾಧ್ಯಕ್ಷರ ವಿರುದ್ದ ಅಸಮಾಧಾನಗೊಂಡಿದ್ದಾರೆ.