ಚಿತ್ರದುರ್ಗ –
ಭೂಸ್ವಾಧಿನಕೊಂಡ ಭೂಮಿಗೆ ಪರಿಹಾರ ನೀಡುವ ವಿಚಾರ ಕುರಿತಂತೆ ಮಹಿಳೆಯೊಬ್ಬರಿಂದ 6 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಭೂಸ್ವಾಧೀನ ಇಲಾಖೆಯ ಮೂವರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದ ಘಟನೆ ಚಿತ್ರದುರ್ಗ ದಲ್ಲಿ ನಡೆದಿದೆ.
ಹೌದು ಮಹಿಳೆಯೊಬ್ಬರಿಂದ 6 ಲಕ್ಷ ಲಂಚ ಸ್ವೀಕರಿ ಸುವಾಗ ರೇಂಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.ಜಿಲ್ಲೆಯ ಹಿರಿಯೂರು ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಮಹಿಳೆಯ ದೂರಿನ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಜಯಪ್ರ ಕಾಶ್ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳಾದ ಬಸವರಾಜ್ ಆರ್.ಮಗದುಮ್ ಹಾಗೂ ಪೋಲಿಸ್ ನಿರೀಕ್ಷಕರುಗಳಾದ ಪ್ರವೀಣ್ ಕುಮಾರ್, ಹಸನ್ ಸಾಬ್, ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಹಿರಿಯೂರು ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಭೂಸ್ವಾಧೀನ ಕಛೇರಿ ಹಾಗೂ ಮನೆಯ ಮೇಲೆ ದಾಳಿ ನಡೆಸಲಾಗಿದೆ.
ಹಿರಿಯೂರು ಭೂಸ್ವಾಧೀನ ವಿಶೇಷ ಅಧಿಕಾರಿ ಗಳಾದ ವೀರೇಶ್ ಕುಮಾರ್,ಮ್ಯಾನೇಜರ್ ಮೋಹನ್ ಕುಮಾರ್, ಹಾಗೂ ಕಾರು ಚಾಲಕ ಮನ್ಸೂರ್ ಅವರು ಎಸಿಬಿ ಬಲೆಗೆ ಸಿಕ್ಕಿಬಿದ್ದಿರುವ ಭ್ರಷ್ಟ ಅಧಿಕಾರಿಗಳಾಗಿದ್ದಾರೆ.
ಬೀದರ್ ನಿಂದ ಹಿರಿಯೂರು ಮೂಲಕ ಶ್ರೀರಂಗ ಪಟ್ಟಣ ಹಾದು ಹೋಗುವ ಎನ್.ಹೆಚ್ -150ಎ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಹಿರಿಯೂರು ನಗರದ ವಿಎಂಪಿ ಮಹಲ್ ಹೋಟೆಲ್ ಮುಂಭಾಗದ ದೂರು ನೀಡಿರುವ ಮಹಿಳೆಯ ಜಮೀನು ಇದೆ.ಇವರ ಜಮೀನನ್ನು ರಸ್ತೆಗೆ ಭೂಸ್ವಾಧೀನ ಪಡಿಸಿಕೊಂಡು ಜಮೀನಿನ 93 ಲಕ್ಷ ರೂಪಾಯಿ ಪರಿಹಾರ ಹಣ ನೀಡುವುದಕ್ಕೆ 9 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಆದರೆ ಇದಕ್ಕೆ ಮಹಿಳೆ ಒಪ್ಪದಿದ್ದಾಗ ಅಂತಿಮವಾಗಿ ಕಾರು ಚಾಲಕನ ಮಾತುಕತೆಯ ಮೂಲಕ 6 ಲಕ್ಷ ರೂಪಾಯಿ ಲಂಚ ನೀಡಲು ಒಪ್ಪಿಗೆ ನೀಡಿದ್ದಾರೆ. ಮಹಿಳೆಯಿಂದ ಕಾರು ಚಾಲಕ ಹಣ ಪಡೆದು ಮ್ಯಾನೇಜರ್ ಮೋಹನ್ ಕುಮಾರ್ ಗೆ ಕೊಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿ ಗಳನ್ನು ದಸ್ತಗಿರಿ ಮಾಡಿ ನಂತರ ಭೂಸ್ವಾಧೀನ ಅಧಿಕಾರಿಯೊಂದಿಗೆ ಮೂವರನ್ನು ಎಸಿಬಿ ಅಧಿಕಾರಿ ಗಳು ವಶಕ್ಕೆ ತಗೆದುಕೊಂಡು ತನಿಖೆ ಮಾಡ್ತಾ ಇದ್ದಾರೆ.