ವಿಜಯಪುರ –
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಮಹಾನ್ ನಾಯಕರೇ……
29-09-2021 ರಲ್ಲಿ ಬೆಳಗಾವಿಯಲ್ಲಿ ನೀವು ರಾಜ್ಯ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆ ಆಯೋಜನೆ ಮಾಡಿ ಕೆಲವೊಂದು ನಿರ್ಣಯಗಳನ್ನು ಕೈ ಗೊಂಡಿರಿ ಅದರಲ್ಲಿ ಮುಖ್ಯವಾಗಿ ಅಂದರೆ ತಕ್ಷಣವೇ ವರ್ಗಾ ವಣೆ ಪ್ರಾರಂಭ,ಸೇವಾನಿರತ ಪದವೀಧರರನ್ನು ಜಿ ಪಿ ಟಿ ಗೆ ವಿಲೀನಗೊಳಿಸುವ,ಸೇವಾ ಅವಧಿ ಯಲ್ಲಿ ಒಮ್ಮೆ ಸ್ವಂತ ಜಿಲ್ಲೆಗೆ ವರ್ಗಾವಣೆ ಇವೆಲ್ಲ ಕಾರ್ಯರೂಪಕ್ಕೆ ಬರಬೇಕು ಅಂತ ನೀವು ಚರ್ಚೆ ಮಾಡಿ ಪ್ರಸ್ತುತ ನಡೆಯುತ್ತಿರುವ ನಿಷ್ಠ ತರಬೇತಿ ಗಳನ್ನು ಎಲ್ಲ ಶಿಕ್ಷಕರು ಬಹಿಷ್ಕರಿಸಬೇಕು ಅಂತ ತೀರ್ಮಾನ ಕೈಗೊಂಡಿದ್ದು ಒಳ್ಳೆಯದೇ,ಆದರೆ ಸೇವಾ ನಿರತ ಪದವಿ ಶಿಕ್ಷಕರು ಇನ್ನೂ ಮುಂದೆ ಯಾವದೇ ಕಾರಣಕ್ಕೂ 6-8 ನೆ ವರ್ಗಗಳಿಗೆ ಬೋಧನೆ ಮಾಡುವದನ್ನು ಬಹಿಷ್ಕಾರ ಮಾಡಿಸಿ, ಇಲ್ಲಾ ಎನ್ ಪೀ ಎಸ್ ರದ್ದು ಮಾಡಲಿಲ್ಲ ಅಂದ್ರೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿ.ಕೇವಲ ಐಷಾರಾಮಿ ಕಾರಿನಲ್ಲಿ ತಿರುಗಾಡಿ ಸಭೆ ಸಮಾರಂಭ ಮಾಡಿದರೆ ಶಿಕ್ಷಕರ ಸಮಸ್ಯೆ ಪರಿಹಾರ ಆಗಲ್ಲ.ನೀವು ಮಾಡುತ್ತಿರುವ ಸಭೆ,ಸಮಾರಂಭ ನೋಡಿದ್ರೆ ಇದಕ್ಕೆ ದುಡ್ಡು ಎಲ್ಲಿಂದ ಬರುತ್ತೆ ಇವರಿಗೆ ? ಅಂತ ಎಷ್ಟೊ ಶಿಕ್ಷಕರು ಪ್ರಶ್ನೆ ಮಾಡ್ತಾರೆ.
ಹೌದು ರಾಜ್ಯ ಶಿಕ್ಷಕರ ಸಂಘಕ್ಕೆ ಜಮಾ ಆದ ವಂತಿಗೆ ಹಣದಲ್ಲಿ ಅನಾವಶ್ಯಕ ಖರ್ಚು ಕಡಿಮೆ ಮಾಡಿ. ನಿಮಗೆ ತಿರುಗಾಡಲು ಅವಶ್ಯ ಇದ್ದರೆ ಸ್ವಂತ ವಾಹನ ಬಳಿಸಿ ಅದನ್ನು ಬಿಟ್ಟು ನಮ್ಮ ಶಿಕ್ಷಕರ ವಂತಿಗೆ ಹಣ ದಲ್ಲಿ ಅಷ್ಟೊಂದು ದೊಡ್ಡ ಮೊತ್ತದ ಕಾರು ನಿಮಗೆ ಅವಶ್ಯಕವೇ?
- ನಿಮ್ಮ ತಪ್ಪುಗಳನ್ನು ಪ್ರಶ್ನೆ ಮಾಡಿದರೆ ನಿಮ್ಮನ್ನು ನೀವು ಅವಲೋಕನ ಮಾಡಿಕೊಳ್ಳಿ,ಅದನ್ನು ಬಿಟ್ಟು ಸಂಘದಿಂದ ನಿಮ್ಮನ್ನು ಉಚ್ಚಾಟನೆ ಮಾಡ್ತೀನಿ ಅಂತ ಹೇಳುವದು ಸರಿಯೇ?
- ಶಿಕ್ಷಕರ ಅಭಿಮಾನದ ಮತ ಪಡೆದು ಆಯ್ಕೆ ಆಗಿದ್ದೇವೆ ನಾವು.ನಮ್ಮನ್ನು ಉಚ್ಚಾಟನೆ ಮಾಡುವ ಅಧಿಕಾರ ನಿಮಗೆ ಇಲ್ಲ.ವಾಮಮಾರ್ಗದ ಮೂಲಕ ಆಯ್ಕೆ ಆಗಿ ಅಧಿಕಾರ ತಗೊಂಡಿರುವ ವಿಚಾರ ಇಡೀ ರಾಜ್ಯಕ್ಕೆ ಗೊತ್ತು ಅನ್ನೋ ವಿಚಾರ ನಿಮಗೆ ಗೊತ್ತಿಲ್ಲವೇ? ನಿಮ್ಮ ಸಾಧನೆಗಳು ಏನು ಅನ್ನೋದು ಒಮ್ಮೆ ಹಿಂದೆ ಮೆಲಕು ಹಾಕಿ.ಶಿಕ್ಷಕರ ವರ್ಗಾವಣೆಯನ್ನು ಒಂದು ವರ್ಷ ಪೂರ್ತಿ ನಡೆಯಲು ಅವಕಾಶ ಮಾಡಿಕೊಟ್ಟ ಹಾಗೂ ಹಿಂಬಡ್ತಿ ಕೊಡಿಸಿದ ಮಹಾನ್ ನಾಯಕರ ಸಂಘ ಅಂತ ಶಿಕ್ಷಕರು ಅನ್ನುವುದಿಲ್ಲವೇ?
- ಶಿಕ್ಷಕರ ಸೇವೆ ಮಾಡಲು ನಿಮಗೆ ಮಾಡಲು ಆಗದಿದ್ದರೆ ಶಾಲೆಗೆ ಹೋಗಿ ಮಕ್ಕಳಿಗೆ ಪಾಠ ಮಾಡಲು ಹೋಗಿ .ಇಲ್ಲಾಂದರೆ ಅವರ ಶಾಪಕ್ಕೆ ಗುರಿ ಆಗ್ತಿವಿ ಅಂತ ಅನಿಸುವದಿಲ್ಲವೇ?
ನಾನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿ ಆಗಿದ್ದರೂ ಸಂಘದ ವಿರುದ್ಧ ಬರೆದಿದ್ದಕ್ಕೆ ಕೋಪ ಮಾಡಿಕೊಳ್ಳದೆ ತಪ್ಪುಗಳನ್ನು ಆತ್ಮ ವಿಮರ್ಶೆ ಮಾಡಿಕೊಂಡು ಶಿಕ್ಷಕರಿಗೆ ಅನುಕೂಲವಾಗುವ ಕೆಲಸ ಕೈಗೊಂಡರೆ ನಿಮ್ಮನ್ನೇ ಶಿಕ್ಷಕರು ಪ್ರಶಂಸೆ ಮಾಡ್ತಾರೆ.ಅಲ್ಲದೆ ನಿಮ್ಮನ್ನು ಅಭಿಮಾನದಿಂದ ಸ್ವಂತ ಹಣದಿಂದ ಕರೆದು ಸನ್ಮಾನ ಮಾಡ್ತಾರೆ.ಅಧಿಕಾರ,ಹಣದ ಆಸೆಗೆ ಸಂಘಕ್ಕೆ ಬರಬೇಡಿ,ಶಿಕ್ಷಕರ ಸೇವೆಗೆ ಸಂಘಕ್ಕೆ ಬನ್ನಿ.ಜೈ ಜವಾನ್,ಜೈ ಕಿಸಾನ್,ಜೈ ವಿಜ್ಞಾನ್,ಜೈ ಶಿಕ್ಷಕ. ??????? ಇಂದ,
ಶ್ರೀ ಆನಂದ ಬೀ ಕೆಂಭಾವಿ ಸ.ಶೀ ಸರಕಾರಿ KBHPS ಹಿರೇಮಸಳಿ ಹಾಗೂ ನಿರ್ದೇಶಕರು KSPSTA ಇಂಡಿ ಜಿಲ್ಲೆ ವಿಜಯಪುರ