ಹುಬ್ಬಳ್ಳಿ –
ಸಾಮಾನ್ಯವಾಗಿ ಪ್ರತಿಯೊಬ್ಬ ತಂದೆ ತಾಯಿ ತಮ್ಮ ತಮ್ಮ ಮಕ್ಕಳ ಹುಟ್ಟು ಹಬ್ಬವನ್ನು ಹಾಗೇ ಹೀಗೆ ಆಚರಣೆ ಮಾಡಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಹೀಗಿರುವಾಗ ಹುಬ್ಬಳ್ಳಿಯಲ್ಲಿ ತಂದೆ ತಾಯಿ ಸೇರಿಕೊಂಡು ತಮ್ಮ ಮಗನ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡದೇ ಅದೇ ಹಣದಲ್ಲಿ ನಿರ್ಗತಿಕರಿಗೆ ಬೆಡ್ ಶೀಟ್ ಗಳನ್ನು ನೀಡಿದ್ದಾರೆ
ಹೌದು ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಸಾಮಾಜಿಕ ಜವಾಬ್ದಾರಿ ತೋರುವ ಯುವ ಉತ್ಸಾಹಿ ವೀರೇಶ ಕಡಕೋಳಮಠ ಅವರು ತಮ್ಮ ಪುತ್ರ ಆರ್ಯನ್ ರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡದೇ ಅದೇ ಹಣದಲ್ಲಿ ಬೇಡ್ವಶಿಟ್ ಹಂಚಿದ್ದಾರೆ.
ಸುರೇಶ್ ಗೋಕಾಕ ಸಹೋದರರ ಮತ್ತು ಇನ್ನಿತರರ ನೇತೃತ್ವದಲ್ಲಿ ವೀರೇಶ್ ಕಡಕೋಳಮಠ್ ಅವರು ಮಗ ಅಥರ್ವ ನ ಹುಟ್ಟುಹಬ್ಬದ ಪ್ರಯುಕ್ತ ರಸ್ತೆಯ ಅಕ್ಕ ಪಕ್ಕದಲ್ಲಿನ ಅನಾಥ ಮತ್ತು ನಿರ್ಗತಿಕರಿಗೆ ಬೆಡ್ ಶಿಟ್ ನೀಡಿ ಬೆಚ್ಚಗಾದರು.
ಲಾಕ್ ಡೌನ್ ಸಮಯದಲ್ಲೂ ಇಂಥಹ ಹಲವಾರು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ಇವರು ಈಗ ತಮ್ಮ ಮಗನ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡದೇ ಅದೇ ಹಣದಲ್ಲಿ ಹೀಗೆ ನೆರವಾಗುವ ಮೂಲಕ ಮತ್ತೊಂದು ಸಾಮಾಜಿಕ ಜವಾಬ್ದಾರಿಯ ಕೆಲಸವನ್ನು ತೋರಿಸಿಕೊಟ್ಟರು
ಸುರೇಶ್ ಗೋಕಾಕ್ ಸಹೋದರರ ಮತ್ರು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಬಳಗ (ರಿ)ವಿನ್ಸ್ ಗೆಳಯರ ಬಳಗ ಹುಬ್ಬಳ್ಳಿ ಇವರು ಕೂಡಾ ಈ ಒಂದು ಕಾರ್ಯದಲ್ಲಿ ಪಾಲ್ಗೊಂಡು ಸಾಥ್ ನೀಡಿದರು.