ಬೆಂಗಳೂರು –
ಹಗಲು ಮತ್ತು ರಾತ್ರಿ ವೇಳೆ ಮನೆಗೆ ಕನ್ನ ಹಾಕುತ್ತಿದ್ದ ದಂಪತಿಯನ್ನು ಬಂಧಿಸಿದ ಘಟನೆ ಬೆಂಗಳೂರು ನಲ್ಲಿ ನಡೆದಿದೆ. ಹೌದು ಉತ್ತರ ವಿಭಾಗದ ಆರ್ ಟಿ ನಗರ ಠಾಣೆ ಪೊಲೀಸರು ಬಂಧಿಸಿ 8.5 ಲಕ್ಷ ರೂ. ಮೌಲ್ಯದ 193 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.ಆರ್ ಟಿ ನಗರ ದ ಮಂಜುನಾಥ್ ಲೇಔಟ್‍ನಲ್ಲಿರುವ ಸತ್ಯನಾರಾಯಣ ಅಪಾರ್ಟ್‍ಮೆಂಟ್ ನಿವಾಸಿ ವಿಜಯಲಕ್ಷ್ಮಿ ಎಂಬುವರು ಸೆ.16 ರಂದು ಬೆಳಗ್ಗೆ 8.30ರ ಸುಮಾರಿನಲ್ಲಿ ಎಂದಿನಂತೆ ಕೆಲಸಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿ ಕೀ ಯನ್ನು ಕಿಟಕಿ ಹತ್ತಿರ ಇಟ್ಟು ಹೋಗಿದ್ದರು.
ಸಂಜೆ 4 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾದಾಗ ಮನೆಗೆ ಹಾಕಿದ ಕೀ ಹಾಕಿದಂತೆಯೇ ಇತ್ತು.ಒಳಗೆ ಹೋಗಿ ಪರಿಶೀಲಿ ಸಿದಾಗ ಬೀರುವಿನಲ್ಲಿದ್ದ ಚಿನ್ನಾಭರಣಗಳು ಕಳವಾಗಿರು ವುದು ತಿಳಿದು ಆರ್ ಟಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ಪ್ರಕರಣದಲ್ಲಿ ಕೃತ್ಯ ನಡೆದ ಸ್ಥಳದಲ್ಲಿ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದು ದೊರೆತ ಬೆರಳು ಮುದ್ರೆಗಳನ್ನು ಪೊಲೀಸರು ಪಡೆದು ತಾಳೆ ಮಾಡಿ ನೋಡಿ ದಾಗ ಆರೋಪಿಗಳು 2019ನೇ ಸಾಲಿನಲ್ಲಿ ಮಲ್ಲೇಶ್ವರಂ ಠಾಣೆ ವ್ಯಾಪ್ತಿಗಳಲ್ಲಿ ಮನೆಗಳವು ಪ್ರಕರಣದಲ್ಲಿ ಬಂಧಿತ ರಾಗಿದ್ದ ಆರೋಪಿಗಳಿಗೆ ತಾಳೆಯಾಗಿದೆ.
ಇದನ್ನು ಆಧರಿಸಿ ಡಿಜೆಹಳ್ಳಿಯ ಕಾವಲ್ ಬೈರಸಂದ್ರದ ವಿನಾಯಕ ಟಾಕೀಸ್ ಹಿಂಭಾಗ ದಂಪತಿಯನ್ನು ಬಂಧಿಸಿ 8.5 ಲಕ್ಷ ರೂ.ಬೆಲೆ ಬಾಳುವ 193 ಗ್ರಾಂ ಚಿನ್ನದ ಆಭರಣ ಗಳನ್ನು ಆರ್ ಟಿ ನಗರ ಠಾಣೆ ಪೊಲೀಸರು ವಶಪಡಿಸಿ ಕೊಂಡಿ.ಆರೋಪಿ ಮಹಿಳೆ ಗೃಹಿಣಿಯಾಗಿದ್ದು ಈಕೆಯ ಪತಿ ಸ್ಥಳೀಯ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾನೆ. ಹಗಲು ವೇಳೆಯಲ್ಲಿ ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಮನೆ ಮನೆಗೆ ಹೋಗಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಂಡು ಬಂದು ಪತ್ನಿಗೆ ಮಾಹಿತಿ ನೀಡುತ್ತಿದ್ದನು.
ಪತಿ ಮನೆಗಳ್ಳತನ ಮಾಡುವ ಸಂದರ್ಭದಲ್ಲಿ ಪತ್ನಿ ಹೊರಗೆ ನಿಂತುಕೊಂಡು ಸಾರ್ವಜನಿಕರು ಬರುತ್ತಾರೆಯೋ ಎಂದು ಗಮನಿಸುತ್ತಿದ್ದಳು ನಂತರ ಇಬ್ಬರು ಅಲ್ಲಿಂದ ಪರಾರಿಯಾ ಗುತ್ತಿದ್ದರು.ಆರೋಪಿಗಳ ವಿರುದ್ಧ ರಾಮಮೂರ್ತಿನಗರ, ಯಶವಂತಪುರ,ಅಶೋಕನಗರ,ಡಿ.ಜೆ.ಹಳ್ಳಿ, ಅನ್ನಪೂ ರ್ಣೇಶ್ವರಿನಗರ,ವಿವೇಕನಗರ,ಬೆಳ್ಳಂದೂರು, ವಿಧಾನ ಸೌಧ,ಕೊತ್ತನೂರು,ಮಡಿವಾಳ, ಕೆ.ಆರ್.ಪುರಂ ಪೊಲೀಸ್ ಠಾಣೆಗಳಲ್ಲಿ ಹಗಲು ಮತ್ತು ರಾತ್ರಿ ಮನೆಗಳಿಗೆ ಕನ್ನ ಹಾಕಿ ಕಳ್ಳತನ ಮಾಡಿದ ದೂರುಗಳು ಇದ್ದವು.ಠಾಣೆಯ 3 ಮನೆಗಳವು,3 ಹಗಲು ಮತ್ತು ರಾತ್ರಿ ಕಳ್ಳತನ ಪ್ರಕರಣ ಗಳು ಸೇರಿದಂತೆ ಒಟ್ಟು ಆರು ಪ್ರಕರಣಗಳು ಪತ್ತೆಯಾಗಿವೆ. ಇನ್ಸ್ಪೆಕ್ಟರ್ ಅಶ್ವಥ್‍ಗೌಡ ಅವರ ನೇತೃತ್ವದ ತಂಡ ಆರೋ ಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.