ಬೆಂಗಳೂರು –
ಶಿಕ್ಷಕರಾಗಿದ್ದುಕೊಂಡು ಮಕ್ಕಳಿಗೆ ಪಾಠದ ಬದಲಿಗೆ ಅನ್ಯ ಇಲಾಖೆಯಲ್ಲಿ ನಿಯೋಜನೆಗೊಂಡಿರುವ ಶಿಕ್ಷಕರನ್ನು ಕೂಡಲೇ ಬಿಡುಗಡೆ ಮಾಡಿ ಮಾತೃ ಇಲಾಖೆಗೆ ಕಳಿಸುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಮಾಡಿ ಜಿಲ್ಲಾಧಿ ಕಾರಿ ಗಳಿಗೆ ಸೂಚನೆ ನೀಡಿದ್ದಾರೆ.ಹೌದು ರದ್ಧತಿಗೆ ಆದೇಶ ನೀಡಿದ್ದು ವಾರದೊಳಗೆ ಮಾತೃ ಇಲಾಖೆಗೆ ಮರಳುವಂತೆ ಸೂಚನೆ ನೀಡಲಾಗಿದೆ.
ಹೌದು ದಸರಾ ಮುಗಿದ ನಂತರ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗು ವುದು.ಹೀಗಾಗಿ ಅನ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರು ವವರ ನಿಯೋಜನೆಯನ್ನು ರದ್ದುಗೊಳಿಸಿ ಶಾಲೆಗೆ ಮರಳು ವಂತೆ ತಿಳಿಸಲಾಗಿದೆ.
ಸಾಕ್ಷರತೆ ಕಾರ್ಯಕ್ರಮ ಸೇರಿದಂತೆ ವಿವಿಧ ಯೋಜನೆ ಗಳಡಿ ಶಿಕ್ಷಕರನ್ನು ಅನ್ಯ ಇಲಾಖೆಗೆ ನಿಯೋಜಿಸಲಾಗಿದೆ. ಇಂಥವರ ಸೇವಾವಧಿ 2021ರ ಮಾರ್ಚ್ ಗೆ ಕೊನೆಯಾ ಗಿದೆ.ದಸರಾ ಮುಗಿದ ನಂತರ ಶಾಲೆಗಳು ಆರಂಭವಾಗುತ್ತಿ ರುವುದರಿಂದ ಇಂತಹ ಶಿಕ್ಷಕರು ಮಾತೃ ಇಲಾಖೆಗೆ ಮರಳ ಬೇಕೆಂದು ಇಲಾಖೆಯ ಆಯುಕ್ತರು ಸೂಚನೆ ನೀಡಿದ್ದಾರೆ
ರಾಜ್ಯದಲ್ಲಿ ಸುಮಾರು 25 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
 
			

 
		 
			























