ಬೆಂಗಳೂರು –
ಆರನೇ ವೇತನ ಆಯೋಗ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಇನ್ನೂ ಒಂದು ವರ್ಷದ ಸಾರಿಗೆ ನೌಕರರ ವೇತನ ನಿರ್ವಹಣೆ ಯನ್ನು ಸರ್ಕಾರ ಅನುದಾನದಲ್ಲೇ ನೀಡುತ್ತಿದ್ದು, ಕಳೆದ ಆಗಸ್ಟ್ ತಿಂಗಳ ಅರ್ಧ ಸಂಬಳವನ್ನು ಸರ್ಕಾರ ಇಂದು ಬಿಡುಗಡೆ ಮಾಡಿದೆ.
ಅಲ್ಲದೆ ಕೆಎಸ್‌ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಹಾಗೂ ಕಲ್ಯಾಣ ಸಾರಿಗೆ ಆಗಸ್ಟ್ ತಿಂಗಳ ಬಾಕಿ ಮೊತ್ತ ಬಿಡುಗಡೆ ಮಾಡಿ ಸರ್ಕಾರ ಆದೇಶಿಸಿದೆ. ನಾಲ್ಕು ಸಾರಿಗೆ ನಿಗಮಗಳಿಗೆ ಆಗಸ್ಟ್ ತಿಂಗಳ ಬಾಕಿ ಸಂಬಳ 171 ಕೋಟಿ ರೂ ಹಣ ಬಿಡುಗಡೆ ಮಾಡಿದೆ.
ಈ ಮೂಲಕ ದಸರಾ ಹಬ್ಬದ ವೇಳೆ ಸಿಬ್ಬಂದಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದ್ದು, ಇದರ ಜೊತೆಗೆ ಇಂದು ಆಯುಧ ಪೂಜೆ ನಡೆಯುತ್ತಿದ್ದು, ಇದಕ್ಕೂ ಸಂಪ್ರದಾಯದಂತೆ ನಿಗಮಗಳು ಹಣ ಬಿಡುಗಡೆ ಮಾಡಿವೆ. ಸಿಬ್ಬಂದಿ ಪ್ರತಿ ವಾಹನಕ್ಕೆ 100 ರೂ ಮತ್ತು ಪ್ರತಿ ವಿಭಾಗೀಯ ಕಾರ್ಯಾ ಗಾರಕ್ಕೆ 1,000 ರೂ ಮುಂಗಡ ನಗದು ಪಡೆಯಬಹು ದಾಗಿದೆ.
 
			

 
		 
			





















