ವಿಜಯಪುರ –
ಕೆಟ್ಟು ನಿಂತಿದ್ದ ಲಾರಿಗೆ ಕಾರವೊಂದು ಡಿಕ್ಕಿಯಾಗಿ ಮೂವರು ಸಾವಿಗೀಡಾದ ಘಟನೆ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದೆ.ವಿಜಯಪುರದ ಹೊನಗನಹಳ್ಳಿ ಬಳಿ ಈ ಒಂದು ಭೀಕರ ಅಪಘಾತವಾಗಿದೆ.ಇನ್ನೂ ರಸ್ತೆ ಪಕ್ಕದಲ್ಲಿ ಕೆಟ್ಟು ನಿಂತುಕೊಂಡಿದ್ದ ಲಾರಿಗೆ ಕಾರು ವೇಗವಾಗಿ ಬಂದು ಡಿಕ್ಕಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಹಾಗೂ ಲಾರಿ ಚಾಲಕ ಸ್ಥಳದಲ್ಲಿ ಸಾವಿಗೀಡಾ ದ್ದಾರೆ.ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಗ್ರಾಮದ ಬಳಿ ಎನ್ ಎಚ್ 50 ರಲ್ಲಿ ಘಟನೆ ನಡೆದಿದ್ದು ಕೆಟ್ಟು ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಲಾರಿ ದುರಸ್ಥಿಯಲ್ಲಿ ನಿರತನಾಗಿದ್ದ ಚಾಲಕ ಕೂಡಾ ಸಾವಿಗೀಡಾಗಿದ್ದಾನೆ.
ಇನ್ನೂ ಇತ್ತ ಕಾರಿನಲ್ಲಿದ್ದ ವಿಜಯಪುರ ನಗರದ ಮೂಲದ ಶಿಕ್ಷಕಿ ಶ್ರೀಮತಿ ಸಾವಿತ್ರಿ ಕಟ್ಟಿಮನಿ ಇವರ ಪತಿ ಹಾಗೂ ಮಗ ಮೃತರಾದವರಾಗಿದ್ದಾರೆ. ಶಿಕ್ಷಕಿ ಎಚ್ ಪಿ ಎಸ್ ಹೊನ್ನಳ್ಳಿ ಶಾಲೆಯಲ್ಲಿ ಜಿಪಿಟಿ ಶಿಕ್ಷಕಿಯಾಗಿದ್ದರು.ಇನ್ನೂ ಅವರ ಪತಿ ಮುಂಡೇವಾಡಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದರು.
ಇವರೊಂದಿಗೆ ಇವರ ಮಗು ಕೂಡಾ ಅಪಘಾತದಲ್ಲಿ ನಿಧನವಾಗಿದೆ.ಇಂದು ಬೆಳಗ್ಗೆ 9 ಗಂಟೆಗೆ ವಿಜಾಪುರಕ್ಕೆ ಆಗಮಿಸುತ್ತಿದ್ದಾಗ ಹೊನಗನಹಳ್ಳಿ ಸಮೀಪ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಇತರೆ ಮೂವರಿಗೆ ಸಣ್ಣ ಪುಟ್ಟ ಪ್ರಮಾಣದಲ್ಲಿ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದರು.ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಇನ್ನೂ ಭೀಕರ ಅಪಘಾತದಲ್ಲಿ ಮೃತರಾದ ಶಿಕ್ಷಕಿ ಶಿಕ್ಷಕ ಮತ್ತು ಕುಟುಂಬದವರಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಶಿಕ್ಷಕಿಯರು ಭಾವಪೂರ್ಣ ಸಂತಾಪವನ್ನು ಸೂಚಿಸಿದ್ದಾರೆ.
ಎಲ್ಲಾ ಸಂಘಟನೆಗಳ ನಾಯಕರು ನಾಯಕಿಯರು ಸೇರಿದಂತೆ ಹಲವರು ಮೃತರಾದ ಕುಟುಂಬಕ್ಕೆ ದೇವರು ಶಾಂತಿಯನ್ನು ಕೊಡಲಿ ದುಖಃವನ್ನು ತಡೆದುಕೊಳ್ಳುವ ಶಕ್ತಿಯನ್ನು ಕೊಡಲೇಂದು ದೇವರಲ್ಲಿ ಪ್ರಾರ್ಥನೆ ಮಾಡಿ ದ್ದಾರೆ.