ಶಿವಮೊಗ್ಗ –
ಮುಕ್ತಾಯಗೊಂಡ ಕಾಮಗಾರಿಯ ಬಿಲ್ ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಪಂಚಾಯತ ಅಧ್ಯಕ್ಷೆಯೊಬ್ಬರು ಎಸಿಬಿ ಬಲೆಗೆ ಬಿದ್ದು ಈಗ ಜೈಲು ಸೇರಿದ್ದಾರೆ.ಹೌದು ಶಿವಮೊಗ್ಗ ತಾಲ್ಲೂಕಿನ ಮುದ್ದಿನಕೊಪ್ಪ ಗ್ರಾಮ ಪಂಚಾಯತ ಅಧ್ಯಕ್ಷೆ ವಾಣಿ ದಂಡಿಪಾನಿ ಅವರೇ ಎಸಿಬಿ ಬಲೆಗೆ ನಿನ್ನೆ ಬಿದ್ದಿದ್ದರು.ಗುತ್ತಿಗೆದಾರ ಲೊಕೇಶ್ ಎಂಬುವರು ಕಾಮಗಾರಿಯೊಂದನ್ನು ಮುಕ್ತಾಯ ಮಾಡಿ ದ್ದರು. ಈ ಒಂದು ಕಾಮಗಾರಿಯ ಬಿಲ್ ಬಿಡುಗಡೆ ಮಾಡಲು 50 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು.
ಈ ಕುರಿತಂತೆ ಗುತ್ತಿಗೆದಾರ ಎಸಿಬಿ ಅವರಿಗೆ ದೂರನ್ನು ನೀಡಿದರು.ದೂರಿನ ಹಿನ್ನಲೆಯಲ್ಲಿ ಕಾರ್ಯಾಚರಣೆ ಮಾಡಿದ ಎಸಿಬಿ ಅಧಿಕಾರಿಗಳು ಎಸ್ಪಿ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಗ್ರಾಮ ಪಂಚಾಯತ ಅಧ್ಯಕ್ಷೆಯನ್ನು ವಶಕ್ಕೆ ತಗೆದುಕೊಂಡಿದ್ದರು. 25 ಸಾವಿರ ರೂಪಾಯಿ ತಗೆದುಕೊಳ್ಳುವಾಗ ರೇಂಡ್ ಹ್ಯಾಂಡ್ ಆಗಿ ಟ್ರ್ಯಾಪ್ ಮಾಡಿದ್ದರು.ಸಧ್ಯ ವಶಕ್ಕೆ ತಗೆದುಕೊಂಡಿರುವ ಎಸಿಬಿ ಅಧಿಕಾರಿಗಳು ಎಲ್ಲಾ ಪ್ರಕ್ರಿಯೆ ಗಳನ್ನು ಮುಗಿಸಿ ಸಧ್ಯ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ