ಡಂಬಳ –
ಇದೊಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಒಂದು ಶಾಲೆಯಲ್ಲಿ ಒಟ್ಟು ಏಳು ತರಗತಿ ಗಳಿದ್ದು ಒಬ್ಬರೇ ಒಬ್ಬರು ಶಿಕ್ಷಕರಿದ್ದಾರೆ.ಹೌದು ಗದಗ ಜಿಲ್ಲೆಯ ಗುಡ್ಡದಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಬ್ಬರೇ ಶಿಕ್ಷಕರಿದ್ದು ಏಳು ತರಗತಿ ಮಕ್ಕಳಿಗೆ ಅವರೊಬ್ಬರೇ ಪಾಠ ಮಾಡುತ್ತಿದ್ದಾರೆ ಶಾಲೆಯಲ್ಲಿ ಒಟ್ಟು 41 ವಿದ್ಯಾರ್ಥಿ ಗಳಿದ್ದಾರೆ.ಈಗಾಗಲೇ ಈ ಒಂದು ಸಮಸ್ಯೆ ಕುರಿತು ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಗ್ರಾಮಸ್ಥರು ಹಲವು ಬಾರಿ ಮನವಿ ನೀಡಿ ಮಾಡಿದರು ಕೂಡಾ ಯಾವುದೇ ಪ್ರಯೋಜ ನವಾಗಿಲ್ಲ.ಹೀಗಾಗಿ ಏಕೋಪಾಧ್ಯಾಯ ಶಾಲೆಯ ವಿದ್ಯಾ ರ್ಥಿ ಗಳ ಹಲವು ಸಮಸ್ಯೆಗಳನ್ನು ಎದರಿಸುವಂತಾಗಿದೆ.
ಒಬ್ಬರೇ ಶಿಕ್ಷಕರು ಎಷ್ಟು ವಿಷಯಗಳನ್ನು ಹೇಳಲು ಸಾಧ್ಯ. ನಿಮ್ಮ ಕೈಮುಗಿಯುತ್ತೇವೆ ಶಿಕ್ಷಣ ಸಚಿವರೆ ದಯವಿಟ್ಟು ತಕ್ಷಣ ನಮ್ಮ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡಿ ಎಂಬ ಸಾಮೂಹಿಕ ಆಗ್ರಹ ವನ್ನು ಗ್ರಾಮಸ್ಥರು ಶಾಲಾ ಮಕ್ಕಳು ಮಾಡುತ್ತಿದ್ದಾರೆ.ಇದೇ ಶಾಲೆಯಲ್ಲಿ ಕಲಿಯುತ್ತಿದ್ದ 8ನೇ ತರಗತಿಯ 7 ವಿದ್ಯಾರ್ಥಿಗಳು ಶಿಕ್ಷಕರ ಕೊರತೆಯಿಂದಾಗಿ ಗುಡ್ಡದಬೂದಿಹಾಳ ಸಮೀಪದ ಚಿಕ್ಕವಡ್ಡಟ್ಟಿ ಸರ್ಕಾರಿ ಪ್ರೌಢಶಾಲೆಗೆ ಈ ಹಿಂದೆ ಕೊರೊನಾಕ್ಕಿಂತ ಮೊದಲು ಒಬ್ಬ ಅತಿಥಿ ಶಿಕ್ಷಕರು ಬರುತ್ತಿದ್ದರು ಈಗ ಅವರೂ ಬರುತ್ತಿಲ್ಲ
ಈಗಾಗಲೇ ಈ ಕುರಿತು ಇಲಾಖೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.ಕಚೇರಿ ಕೆಲಸಗಳನ್ನು ನಿರ್ವಹಿಸ ಬೇಕು.ಪಾಠ ಮಾಡುವುದು.ಬಿಸಿಯೂಟ,ಶಿಕ್ಷಕರ ತರಬೇತಿ ಶಿಕ್ಷಕರ ಸಭೆ,ಮಕ್ಕಳ ಹಾಜರಾತಿ ಹಾಕುವುದು,ನಿತ್ಯ ಹಾಜರಾತಿ ಸೇರಿದಂತೆ ಇತರೆ ಮಾಹಿತಿಯನ್ನು ಆನ್‌ಲೈನ್ ಗೆ ದಾಖಲು ಮಾಡುವುದು ಸೇರಿದಂತೆ ಇಡೀ ಶಾಲೆ ಜವಾಬ್ದಾರಿ ನಿರ್ವಾಹಿಸುವುದು ಕಷ್ಟ ಸಾರಿಗೆ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯ ವಂಚಿತ ಗ್ರಾಮವಾಗಿದೆ ಇನ್ನಾದರೂ ಸರ್ಕಾರ ಹೊಸದಾಗಿ ಶಿಕ್ಷಕರನ್ನು ನೇಮಕ ಮಾಡಿಕೊಂಡರೆ ಮಾತ್ರ ಅನಿವಾರ್ಯವಾಗಿ ಇಲ್ಲಿಗೆ ಹೊಸ ಶಿಕ್ಷಕರು ಬರುವ ವಿಶ್ವಾಸವಿದೆ.ಮಕ್ಕಳ ಶಿಕ್ಷಣ ಕಲಿಕೆಯ ಹಿತದೃಷ್ಟಿಯಿಂದ ನಮ್ಮ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡಬೇಕು ಎನ್ನುತ್ತಿದ್ದಾರೆ ಗ್ರಾಮಸ್ಥರು ಇದರ ನಿರೀಕ್ಷೆಯಲ್ಲಿ ಜನರಿದ್ದಾರೆ