ತುಮಕೂರು –
ತುಮಕೂರಿನ ಕೊರಟಗೆರೆ ಯ ಸಿಆರ್ ಪಿ ಚಂದ್ರಯ್ಯ ಅವರಿಗೆ ಕಾರಣ ಕೇಳಿ ನೋಟೀಸ್ ಜಾರಿಗೆ ಮಾಡಲಾಗಿದೆ ಹೌದು ಇವರು KSPSTA ಸಂಘದ ರಾಜ್ಯಾಧ್ಯಕ್ಷರೊಂದಿಗೆ ದೂರವಾಣಿ ಮಾಡಿ ಶಿಕ್ಷಣ ಸಚಿವರ ಮತ್ತು ಹಣದ ವಿಚಾರ ಕುರಿತು ಮಾತನಾಡಿದ್ದಾರೆ.ಈ ಒಂದು ವಿಚಾರ ಕುರಿತು ನಂತರ ಸಾಮಾಜಿಕ ಜಾಲ ತಾಣಗಳಲ್ಲಿ ಆ ಒಂದು ಆಡಿಯೋ ವನ್ನು ಹರಿಬಿಟ್ಟಿದ್ದಾರೆ ಇದನ್ನು ಅರಿತ KSPSTA ಸಂಘದ ಅಧ್ಯಕ್ಷರ ದೂರಿನ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಜಂಟಿ ನಿರ್ದೇಶಕರು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ
ಹೌದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರ ದೂರಿನ ಹಿನ್ನೆಲೆಯಲ್ಲಿ ಈಗ ಅವರಿಗೆ ಕಾರಣ ಕೇಳಿ ನೋಟೀಸ್ ಜಾರಿಗೆ ಮಾಡಲಾಗಿದ್ದು CRP ಅವರು ಉತ್ತರ ನೀಡಿದ ನಂತರ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.