ಬೆಂಗಳೂರು –
ಶಿಕ್ಷಕರ ವರ್ಗಾವಣೆ ಕುರಿತು ಈವರೆಗೆ ಏನೇನು ಆಗಿದೆ ಮುಂದೇನು ಈ ಬಗ್ಗೆ ಸದ್ಯದ ಮಾಹಿತಿ…..
೧. ಪ್ರೌಢಶಾಲಾ ಜಿಲ್ಲೆಯ ಒಳಗಿನ ಕೌನ್ಸಲಿಂಗ್ ಆಯಾ ಉಪನಿರ್ದೇಶಕರ ಕಚೇರಿಯಲ್ಲಿ ನಡೆಯುತ್ತದೆ
೨. TGT ಶಿಕ್ಷಕರ ಹುದ್ದೆ ವಿಜ್ಞಾನ-ಕನ್ನಡ ಬದಲಾವಣೆ ಮಾಡಿ PCM-KANNADA ಮಾಡುವ ಪ್ರಕ್ರಿಯೆ ನಡೆಯುತ್ತಿದೆ, ಒಂದು ವೇಳೆ ಆಗದಿದ್ದರೆ, ಕೌನ್ಸಲಿಂಗ್ ಸಮಯದಲ್ಲಿ PCM ಖಾಲಿ ಹುದ್ದೆಗೆ ವರ್ಗಾವಣೆ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.
೩. ಜಿಲ್ಲೆಯ ಒಳಗಿನ ಕೋರಿಕೆ 7%, ವಿಭಾಗದ ಒಳಗೆ 2%, ವಿಭಾಗದ ಹೊರಗೆ 2% ನೀಡಲಾಗುತ್ತದೆ. 11-11-20 ಮತ್ತು 30-06-21 ಎರಡಕ್ಕೂ ಪ್ರತ್ಯೇಕವಾಗಿ ಇದೇ ಶೇಕಡ ಇರುತ್ತದೆ.
೪. ಎಲ್ಲಾ ವರ್ಗಾವಣೆಗೆ ಕನಿಷ್ಠ ಸೇವೆ ಪ್ರಸ್ತುತ ಶಾಲೆಯಲ್ಲಿ 3 ವರ್ಷ ಆಗಿರಬೇಕು ಕನಿಷ್ಠ ಸೇವೆ ಪೂರೈಸದೆ Approve ಆಗಿರುವ ಅರ್ಜಿಗಳನ್ನು System Reject ಮಾಡುತ್ತದೆ.
೫. ಆಧ್ಯತೆ ಅನುಗುಣವಾಗಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.
೬. ಮೆರಿಟ್ ಅಂಕಗಳನ್ನು ಆಯಾ ವರ್ಷದ ಡಿಸೆಂಬರ್ ತನಕ ಲೆಕ್ಕಾಚಾರ ಮಾಡಲಾಗಿದೆ
೭. ಮೆರಿಟ್ ತಪ್ಪಾಗಿ ಲೆಕ್ಕಾಚಾರ ಆಗಿದ್ದರೆ EEDS ಅಲ್ಲಿ ಪರಿಶೀಲನೆ ಮಾಡಿಕೊಳ್ಳಬೇಕು.
೮. ಕೌನ್ಸಲಿಂಗ್ ನಡೆಸುವಾಗ ಯಾವುದೇ ಸಮಸ್ಯೆ ಬಾರದಂತೆ, ಅಣುಕು ಕೌನ್ಸಲಿಂಗ್ ನಡೆಸಿ, ಪರಿಶೀಲನೆ ಮಾಡುವ ಬಗ್ಗೆ ಉಪನಿರ್ದೇಶಕರ ಕಚೇರಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಇನ್ನೂ ಅಂತಿಮ ಆಗದ ಮಾಹಿತಿ
೧. ದಂಪತಿ ಪ್ರಕರಣ ಜಿಲ್ಲೆಗೆ ಅನ್ವಯಿಸುವುದು.
೨. ಶೇ25 ಖಾಲಿ ಹುದ್ದೆ ಇರುವ ತಾಲೂಕಿನ ವರ್ಗಾವಣೆ ಕೈ ಬಿಟ್ಟು, ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ ಲೆಕ್ಕಾಚಾರ ಮಾಡುವುದು.