ಬೆಂಗಳೂರು –
ಯಾರಿಗೂ ಯಾವ ಇಲಾಖೆಗೂ ಇಲ್ಲದ ಈ ಒಂದು ಅವೈಜ್ಞಾನಿಕ ವರ್ಗಾವಣೆಯ ಕಾಯ್ದೆ ಯಿಂದ ನಾಡಿನ ಶಿಕ್ಷಕರು ಬೇಸತ್ತಿದ್ದು ಪತಿ ಒಂದು ಕಡೆ ಪತ್ನಿ ಮತ್ತೊಂದು ಕಡೆಗೆ ಮಕ್ಕಳು ಇನ್ನೊಂದು ಕಡೆಗೆ ಪೋಷಕರು ಮತ್ತೊಂದು ಕಡೆಯಲ್ಲಿ ಹೀಗೆ ದಿಕ್ಕಾಪಾಲಾಗಿ ಕಳೆದ ಹಲವಾರು ವರ್ಷಗಳಿಂದ ಕೆಲಸವನ್ನು ಮಾಡುತ್ತಿದ್ದಾರೆ ಶಿಕ್ಷಕರು.ಇದನ್ನು ಅರಿತ ಇಲಾಖೆ ಶಿಕ್ಷಕ ಸಮುದಾಯಕ್ಕೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಗಲಿದೆ. ಶಿಕ್ಷಕರ ವರ್ಗಾವಣೆ ಕಾಯ್ದೆಗೆ ಮತ್ತೊಮ್ಮೆ ತಿದ್ದುಪಡಿ ತರಲು ಶಿಕ್ಷಣ ಇಲಾಖೆ ಮುಂದಾಗಿದೆ.
ಶಿಕ್ಷಕರು ತಾವು ಬಯಸಿದ ಜಿಲ್ಲೆಗೆ ಒಂದು ಸಲ ವರ್ಗಾವಣೆ ಯಾಗಲು ಮತ್ತು ಶೇಕಡಾ 25 ಕ್ಕಿಂತ ಹೆಚ್ಚು ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ಲೆಕ್ಕಾಚಾರ ಹಾಕುವ ನಿಯಮವನ್ನು ಕೈಬಿಡಲು ಚಿಂತನೆ ನಡೆದಿದ್ದು ಇಲಾಖೆ ಇದನ್ನು ಮಾಡಲು ಮುಂದಾಗಿದೆ
ಯಾವುದೇ ನಿರ್ಬಂಧಗಳಿಲ್ಲದೆ ಶಿಕ್ಷಕರಿಗೆ ವರ್ಗಾವಣೆ ನೀಡುವ ಕುರಿತಾಗಿ ಕಾಯ್ದೆಗೆ ತಿದ್ದುಪಡಿ ತರಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದ್ದು ಸಚಿವರು ಇದಕ್ಕೆ ಈಗಾಗಲೇ ಒಪ್ಪಿಕೊಂಡು ಬದಲಾವಣೆಯ ಸಿದ್ದತೆ ಯನ್ನು ಮಾಡು ತ್ತಿದ್ದಾರೆ
ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರುವ ಕಾಯ್ದೆ ಮಂಡಿಸಲು ಸಿದ್ದತೆ ಮಾಡಲಾ ಗಿದೆ.ಪ್ರಸ್ತುತ ಇರುವ ನಿಯಮದ ಪ್ರಕಾರ,ಶೇಕಡ 25 ಕ್ಕಿಂತ ಹೆಚ್ಚು ಶಿಕ್ಷಕರ ಕೊರತೆ ಇರುವ ತಾಲೂಕಿನಿಂದ ಹೊರಹೋ ಗಲು ಅವಕಾಶವಿಲ್ಲ.ತಿದ್ದುಪಡಿ ತಂದು ಬಯಸಿದ ಜಿಲ್ಲೆಗೆ ವರ್ಗಾವಣೆಗೆ ಅನುಕೂಲ ಕಲ್ಪಿಸುವ ಸಾಧ್ಯತೆ ಇದೆ ಇದೇನಾದರು ಆದರೆ ಶಿಕ್ಷಕರು ನೆಮ್ಮದಿ ಯಿಂದ ಕರ್ತವ್ಯ ಮಾಡುತ್ತಾರೆ.ಶೀಘ್ರದಲ್ಲೇ ಇದು ಆಗಲಿ ಎಂಬೊಂದು ನಮ್ಮ ಆಶಯ.