ಬೆಂಗಳೂರು –
ಒಂದೆಡೆ ಈಗಷ್ಟೇ ಆರಂಭಗೊಂಡ ಶಾಲೆಗಳು ಮತ್ತೊಂದೆ ಡೆ ಒಮಿಕ್ರಾನ್ ಸೋಂಕಿನ ಭೀತಿ.ಇನ್ನೂ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ರಾಜ್ಯ ಸರಕಾರ ಕೊರೊನಾ ಪರೀಕ್ಷೆ ನಡೆಸುವ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಿದೆ.ಪ್ರತಿದಿನ ರಾಜ್ಯದಲ್ಲಿ 1 ಲಕ್ಷ ಕೊರೊನಾ ಪರೀಕ್ಷೆ ನಡೆಸಬೇಕು.ಈ ಪೈಕಿ ಶೇ.70 ಆರ್ ಟಿಪಿಸಿಆರ್ ಮತ್ತು ಶೇ.30ರಷ್ಟು ಆರ್ ಎಟಿ ಪರೀಕ್ಷೆ ಕಡ್ಡಾಯವಾಗಿ ನಡೆಸುಂತೆ ಸೂಚಿಸಲಾಗಿದೆ.
ಇನ್ನೂ ಶಾಲೆಗಳಲ್ಲಿ ಅಸ್ವಸ್ಥತೆ ಕಂಡು ಬರುವ ಮಕ್ಕಳನ್ನು ತತ್ ಕ್ಷಣವೇ ಪ್ರತ್ಯೇಕಿಸಬೇಕು.ಜ್ವರ, ಕೆಮ್ಮು,ನೆಗಡಿ, ಗಂಟಲು ನೋವು ಇರುವ ಮಕ್ಕಳಿಗೆ ಮೊದಲು ಆರ್ ಎಟಿ ಟೆಸ್ಟ್ ಮಾಡಬೇಕು.ನಂತರ ಐಸಿಎಂಆರ್ ವಿಧಿಸಿ ಮಾನ ದಂಡದ ಪ್ರಕಾರ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಬೇಕು. ಪ್ರತಿವಾರ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನಿಷ್ಠ ಶೇ.5ರಷ್ಟು ಮಕ್ಕಳಿಗೆ ಆರ್ ಟಿಪಿಸಿಆರ್ ಟೆಸ್ಟ್ ಮಾಡುವಂತೆ ಸೂಚಿಸ ಲಾಗಿದೆ.
ಕೇರಳ ಹಾಗೂ ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಆದ್ಯತೆ ಮೇರೆಗೆ ಪರೀಕ್ಷೆ ಹೆಚ್ಚಿಸಬೇಕು.ಹದಿನೈದು ದಿನಕ್ಕೊಮ್ಮೆ ಈ ಕೆಳಗಿನ ಗುಂಪುಗಳಿಗೆ ರ್ಯಾಡಂಮ್ ಪರೀಕ್ಷೆ ನಡೆಸಲು ಸರ್ಕಾರದಿಂದ ಆದೇಶ ಹೊರಡಿಸಿದೆ.ರಾಜ್ಯ ಸರಕಾರ ಹೊರಡಿಸಿದ ಸುತ್ತೂಲೆ ಹಿನ್ನೆಲೆಯಲ್ಲಿ ಈ ಕೆಳಗಿನಂತೆ ಪರೀಕ್ಷೆ ನಡೆಯಲಿದೆ
ಕಾಲೇಜು & ಪ್ರೌಢ ಶಾಲೆಗಳ ವಿದ್ಯಾರ್ಥಿಗಳು & ಶಿಕ್ಷಕರು ಹೋಟೆಲ್ ಗಳು & ರೆಸ್ಟೋರೆಂಟ್ ಸಿಬ್ಬಂದಿಗಳು ಮಾಲ್ ಗಳಲ್ಲಿನ ಶಾಪ್ ಕೀಪರ್ ಗಳು ಮಾರುಕಟ್ಟೆಗಳಲ್ಲಿನ ಶಾಪ್ ಕೀಪರ್ ಗಳು ಪರೀಕ್ಷೆ ನಡೆಸ
ಅಡುಗೆ ಸಿಬ್ಬಂದಿ & ಡೋರ್ ಡೆಲಿವರಿ ಸಿಬ್ಬಂದಿ
ಕಾರ್ಖಾನೆಗಳ ಸಿಬ್ಬಂದಿಗಳು
ಎಲ್ಲಾ ಮಾದರಿಯ ಕಚೇರಿಗಳಿಗೆ ಹೋಗುವವರು
ಪಬ್ ಮತ್ತು ಬಾರ್ ಗಳಲ್ಲಿ ಕೆಲಸ ಮಾಡುವವರು
ಚಿತ್ರಮಂದಿರ ಹಾಗೂ ಮಲ್ಟಿಪ್ಲೆಲ್ಸ್ ನ ಸಿಬ್ಬಂದಿಗಳು
ವೃತ್ತಿಯಿಂದ ಪ್ರತಿ ದಿನ ಹೆಚ್ಚೆಚ್ಚು ಜನ ಸೇರುವಕಡೆಗಳಲ್ಲಿ ಕೆಲಸ ಮಾಡುವವರು
ಅಂಗನವಾಡಿ ಮೇಲ್ವಿಚಾರಕಿ ಹಾಗೂ ಸಿಬ್ಬಂದಿಗಳು