ವಿಜಯಪುರ –
ವಿಜಯಪುರದ ಮಹಾನಗರ ಪಾಲಿಕೆಯ ಆಯುಕ್ತರ ಮೇಲೆ ನಡೆದ ಹಲ್ಲೆಗೆ ಖಂಡನೆ ವ್ಯಕ್ತವಾಗಿದ್ದು ಹಲ್ಲೆಯನ್ನು ಖಂಡಿಸಿ ವಿಜಯಪುರ ದಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ಮಾಡಲಾಯಿತು. ಹೌದು ಪಾಲಿಕೆಯ ಆಯುಕ್ತರಾದ ವಿಜಯಕುಮಾರ್ ಮೆಕ್ಕಳಕಿ ಇವರ ಮೇಲಿನ ಹಲ್ಲೆ ಯನ್ನು ಜಿಲ್ಲಾ ನೌಕರರ ಸಂಘದವರು ಹಾಗೇ ಪಾಲಿಕೆಯ ಸಿಬ್ಬಂದಿ ಖಂಡಿಸಿದ್ದಾರೆ.
ಆಯುಕ್ತರು ಮಹಾನಗರ ಪಾಲಿಕೆ ಇವರ ಮೇಲೆ ಸಾರ್ವಜ ನಿಕರು ಹಲ್ಲೆ ಯನ್ನು ಮಾಡಿದ್ದು ಬಿಜಾಪುರ ಸರ್ಕಾರಿ ನೌಕರ ಸಂಘದಿಂದ ಬೃಹತ್ ಪ್ರತಿಭಟನೆಯನ್ನು ಮಾಡಿ ಮನವಿಯನ್ನು ಸಲ್ಲಿಸಲಾಯಿತು.ಪಾಲಿಕೆಯ ನೌಕರರ ಸಂಘ ಮತ್ತು ಸರ್ಕಾರಿ ನೌಕರರ ಸಂಘದವರು ಸೇರಿಕೊಂಡು ನಗರದಲ್ಲಿ ಮೌನ ಪ್ರತಿಭಟನೆ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿದರು
ನಗರದ ಸಿದ್ದೇಶ್ವರ ದೇವಸ್ಥಾನ ದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೌನ ಪ್ರತಿಭಟನೆಯನ್ನು ಮಾಡಿ ಈ ಕೂಡಲೇ ಹಲ್ಲೆ ಯನ್ನು ಮಾಡಿರುವ ಆರೋಪಿಗಳನ್ನು ಬಂಧನ ಮಾಡುವಂತೆ ಒತ್ತಾಯ ಮಾಡಿದರು ಈ ಒಂದು ಪ್ರತಿಭ ಟನೆ ಜಿಲ್ಲಾ ಪೌರ ಕಾರ್ಮಿಕರ ಸಂಘ ಮತ್ತು ಜಿಲ್ಲಾ ನೌಕರರ ಸಂಘಟನೆಯ ನೇತೃತ್ವದಲ್ಲಿ ಮಾಡಲಾಯಿತು